ಬಂಟ್ವಾಳ: ಜಿಲ್ಲೆಯ ವಿವಿದೆಡೆ “ಆರೋಗ್ಯಹಸ್ತ ” ಕಾರ್ಯಕ್ರಮದಲ್ಲಿ ಭಾಗಿಯಾಗಲು ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿಯ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಶನಿವಾರ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿರುವ ಮಾಜಿಸಚಿವ ರಮಾನಾಥ ರೈ ಅವರ ನಿವಾಸಕ್ಕೆ ಸೌಹಾರ್ಧ ಭೇಟಿ ನೀಡಿದರು. 
ಕೆಪಿಸಿಸಿ ಕಾರ್ಯಾಧ್ಯಕ್ಷರ ಜೊತೆಗೆ ವಿಧಾನಪರಿಷತ್ ನ ಮುಖ್ಯಸಚೇತಕ ನಾರಾಯಣಸ್ವಾಮಿ,ಕೆಪಿಸಿಸಿ ಸದಸ್ಯ ಬಲರಾಜ್ ಮತ್ತಿತರ ನಾಯಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿಕುಂದರ್,ಸುದೀಪ್ ಕುಮಾರ್ ಶೆಟ್ಟಿ ಅವರು ಕಾರ್ಯಾಧ್ಯಕ್ಷರು ಹಾಗೂ ಮುಖ್ಯಸಚೇತಕರನ್ನು ಶಾಲುಹಾಕಿ ಸ್ವಾಗತಿಸಿದರು. ರಮಾನಾಥ ರೈ ಅವರ ಮನೆಯಲ್ಲಿ ಬೋಜನ ಸ್ವೀಕರಿಸಿದ ನಾಯಕರು ಕೆಲಹೊತ್ತುಗಳಕಾಲ ಇದ್ದು ಕುಶಲೋಪಚರಿ ನಡೆಸಿದರಲ್ಲದೆ,ಜಿಲ್ಲೆಯ ರಾಜಕೀಯ ಬೆಳವಣಿಗೆ,ಪಕ್ಷ ಸಂಘಟನೆಯ ಬಗ್ಗೆಯು ಚರ್ಚಿಸಿದರು ಎಂದು ತಿಳಿದುಬಂದಿದೆ. 
ವಿ.ಪ.ಸದಸ್ಯ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್,ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಎಂ.ಎಸ್.ಮಹಮ್ಮದ್,ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ,ಬಂಟ್ವಾಳ ಉಸ್ತುವಾರಿ ಸವಿತಾರಮೇಶ್ ,ಪಿ.ಸಿ.ಮೋಹನ್,ಕಾವು ಹೇಮನಾಥ ಶೆಟ್ಟಿ,ವೆಂಕಪ್ಪ ಪೂಜಾರಿ ಬಂಟ್ವಾಳ ಮೊದಲಾದವರು ಹಾಜರಿದ್ದರು.ಬಳಿಕ ತಾಲೂಕಿನ ಅರಳದಲ್ಲಿ ನಡೆದ ಆರೋಗ್ಯಹಸ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
