ಭಾರತ ಸರಕಾರದಿಂದಇತ್ತೀಚೆಗೆಅಂಗೀಕರಿಸಲ್ಪಟ್ಟಿರುವ ನೂತನರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿ ಜನಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ಒಂದುರಾಷ್ಟ್ರವ್ಯಾಪಿ ಜಾಗೃತಿಅಭಿಯಾನವನ್ನು ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿ ಚರ್ಚೆ, ಸಂವಾದ, ಉಪನ್ಯಾಸ ಮುಂತಾದಕಾರ್ಯಕ್ರಮಗಳ ಜೊತೆಗೆರಾಷ್ಟ್ರೀಯ ಸ್ಪರ್ಧೆಯನ್ನುಆಯೋಜಿಸುತ್ತಿದೆ.
ನೂತನ ಶಿಕ್ಷಣ ನೀತಿಯ ವಿವಿಧತಾತ್ವಿಕ ಆಯಾಮಗಳು ಜನಸಾಮಾನ್ಯರಲ್ಲಿ, ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಣಾಸಕ್ತರಲ್ಲಿ ಚರ್ಚೆಯಾಗಿಕಾರ್ಯಾನ್ವಯನವಾಗಬೇಕೆಂಬದೃಷ್ಟಿಯಿಂದಸಾಮಾಜಿಕಜಾಲತಾಣ (ವೆಬ್ಸೈಟ್www.mynep.in ) ಮಾಧ್ಯಮದಲ್ಲಿಸೆಪ್ಟೆಂಬರ್ 25ರಿಂದ ಅಕ್ಟೋಬರ್ 2ರವರೆಗೆ ನಡೆಸಲು ನಿರ್ಧರಿಸಲಾಗಿದೆ.
MyNEPCompetition F ¸ಈ ಸ್ಪರ್ಧೆಗಳು ಭಾರತಕೇಂದ್ರಿತ ಶಿಕ್ಷಣ – ಸಮಗ್ರದೃಷ್ಟಿಯ ಶಿಕ್ಷಣ – ಜ್ಞಾನಾಧಾರಿತ ಸಮುದಾಯ ಮತ್ತುಗುಣಮಟ್ಟದ ಶಿಕ್ಷಣ ಈ ನಾಲ್ಕು ಪ್ರಮುಖತಾತ್ವಿಕ ಪರಿಕಲ್ಪನೆಗಳನ್ನು ಒಳಗೊಂಡು ನಡೆಯಲಿದೆ.ದೇಶದ 13 ಬೇರೆ ಬೇರೆ ಭಾಷೆಗಳಲ್ಲಿ ಮೂರುರೀತಿಯ ಗುಂಪುಗಳಲ್ಲಿ ನಡೆಯುತ್ತಿದೆ. (9ರಿಂದ12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ನಾಗರಿಕರಿಗೆ) ಎಲ್ಲಾ ವಿಜೇತರಿಗೆ ನಗದು ಬಹುಮಾನವನ್ನು ಮತ್ತು ಪ್ರಮಾಣ ಪತ್ರವನ್ನು ಹಾಗೂ ಭಾಗವಹಿಸುವ ಎಲ್ಲರಿಗೂ Participate Certificatez ದೊರೆಯುವುದು.
ಚಿತ್ರಕಲೆ, ಕಾರ್ಟೂನ್ರಚನೆ, ಪ್ರಧಾನಮಂತ್ರಿಯವರಿಗೆ ಪತ್ರ, 2 ನಿಮಿಷದ ಭಾಷಣ, ಪ್ರಬಂಧ ಸ್ಪರ್ಧೆ, 2.20 ನಿಮಿಷದಕಿರುಚಿತ್ರದ ನಿರ್ಮಾಣ, ಡಿಜಿಟಲ್ಡಿಸೈನಿಂಗ್ ಹಾಗೂ 8ಟ್ವಿಟರ್ತ್ರೆಡ್ ((twitter thread)ಅಲ್ಲದೆರಸಪ್ರಶ್ನೆ ಸ್ಪರ್ಧೆಗಳನ್ನು ಈ ವಿವಿಧ ಗುಂಪುಗಳಿಗೆ 13 ಭಾಷೆಗಳಲ್ಲಿ ಆಯೋಜಿಸಲಾಗುವುದು.
11 ಸೆಪ್ಟೆಂಬರ್ 2020ಕ್ಕೆ ಬಿಡುಗಡೆಯಾಗುವ www.mynep.in ಎಂಬ ವೆಬ್ಸೈಟ್ನ ಮೂಲಕ ಸ್ಪರ್ಧೆಗಳಿಗೆ ಹೆಸರು ನೊಂದಾಯಿಸಿ ಸೂಚಿಸಿದ ನಿಯಮಗಳಿಗೆ ಅನುಸಾರವಾಗಿತಮ್ಮತಮ್ಮ ಸಾಮಾಜಿಕ ಜಾಲತಾಣಗಳ ಮುಖಾಂತರಎಲ್ಲಾ ಸ್ಪರ್ಧೆಗಳಿಗೆ ಭಾಗವಹಿಸಬಹುದು. ತಮ್ಮ ವಿಭಾಗ ವಿಷಯವಾರು ಸ್ಪರ್ಧೆಗಳನ್ನು ಆಯ್ಕೆಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿದ್ಯಾಭಾರತಿಕರೆನೀಡುತ್ತದೆ.
ಈ ನೂತನರಾಷ್ಟ್ರೀಯ ಶಿಕ್ಷಣ ನೀತಿಯುಒಂದು ವಿಶೇಷ ರೀತಿಯಲ್ಲಿಜನರ ಹಾಗೂ ಸಾಮಾಜಿಕ ಸಂಘಟನೆಗಳ ವಿವಿಧ ಹಂತದಚರ್ಚೆ ಹಾಗೂ ಸಲಹೆಗಳ ಪರಿಣಾಮವಾಗಿರಚನೆಯಾಗಿದ್ದು,ಇದರ ಬಗ್ಗೆ ಯುವಚೈತನ್ಯಪೂರ್ಣ ಸ್ವಯಂಸೇವಕರ ಮೂಲಕ ಸಾರ್ವಜನಿಕಜನಜಾಗೃತಿನಡೆಯಬೇಕಾಗಿದೆ.
ಔಟಿಟiಟಿe ನಲ್ಲಿಜನಜಾಗೃತಿಯ ಕಾರ್ಯಕ್ರಮಗಳ ನಿರ್ವಹಣೆಗೆರಾಷ್ಟ್ರೀಯ ಶಿಕ್ಷಣ ನೀತಿಯ ರಾಯಭಾರಿಗಳನ್ನು ಗುರುತಿಸಿ ನಿಯುಕ್ತಿಗೊಳಿಸಲಾಗುವುದು. ಇದಲ್ಲದೆ, ಶಾಲೆ, ಕಾಲೇಜುಗಳು, ಉನ್ನತ ಶಿಕ್ಷಣದ ವಿದ್ಯಾಕೇಂದ್ರಗಳು ಸಹ ಈ ಅಭಿಯಾನದಲ್ಲಿ ಕೈಜೋಡಿಸಿ ಈ ಶಿಕ್ಷಣ ನೀತಿಯನ್ನು ಬೆಂಬಲಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಂಕಲ್ಪದಲ್ಲಿ ಭಾಗವಹಿಸಲು ವಿದ್ಯಾಭಾರತಿಕರ್ನಾಟಕದ ಪರವಾಗಿ ಪ್ರಾಂತೀಯ ಕಾರ್ಯದರ್ಶಿ ವಸಂತ ಮಾಧವಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.
