ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ತಾಲೂಕು ಪ್ರಖಂಡದ ನೇತೃತ್ವದಲ್ಲಿ ವಿಹಿಂ.ಪ., ಬಜರಂಗದಳ ಶ್ರೀ ಕಾರಿಂಜೇಶ್ವರ ಕಾವಳಮೂಡೂರು ಘಟಕದ ಆಶ್ರಯದಲ್ಲಿ ಆಯುಷ್ಮಾನ್ ಯೋಜನೆಯ ಉಚಿತ ಕಾರ್ಡ್ ನೋಂದಣಿ ಮತ್ತು ವಿತರಣೆಯ ಕಾರ್ಯಕ್ರಮ ಕೆದ್ದಳಿಕೆ ಶಾಲೆಯಲ್ಲಿ ಜರಗಿತು. 
ಜ್ಯೋತಿಷ ವಿದ್ವಾನ್ ವೆಂಕಟರಮಣ ಮುಚ್ಚಿನ್ನಾಯ ಕಾರಿಂಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿ.ಹಿಂ.ಪ. ಜಿಲ್ಲಾ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಭೇಟಿ ನೀಡಿದರು.
ಬಜರಂಗದಳ ಜಿಲ್ಲಾ ಸಹ ಸಂಚಾಲಕರಾದ ಭರತ್ ಕುಮ್ಡೇಲು, ಗುರುರಾಜ್ ಬಂಟ್ವಾಳ, ಕೆದ್ದಳಿಕೆ ಸ.ಹ.ಪ್ರಾ.ಶಾಲಾ ಶಿಕ್ಷಕ ಕುಮಾರ್ ಸಿ., ಪುರುಷೋತ್ತಮ ಗೌಡ ದೇವಶ್ಯ, ವಿ.ಹಿ.ಪ. ಅಧ್ಯಕ್ಷ ಬಿ. ಪದ್ಮನಾಭ ಬಂಟ್ವಾಳ, ಅಭಿನ್ ರೈ, ಸಂತೋಷ್ ಕುಲಾಲ್, ಲೋಹಿತ್ ಕುಮಾರ್, ಮೋಹನ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.ಕೆದ್ದಳಿಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ ಸ್ವಾಗತಿಸಿ, ಕಿಶೋರ್ ಕುಮಾರ್ ಗುರಿಮಜಲು ವಂದಿಸಿದರು. ಕೌಶಿಕ್ ಪೆರುವಾರು ಕಾರ್ಯಕ್ರಮ ನಿರೂಪಿಸಿರು.
