ಬಂಟ್ವಾಳ : ತಾಲೂಕಿನ ನರಿಕೊಂಬು ಕೋಮೆ ತರವಾಡು ಮನೆ ನಿವಾಸಿ, ಭಾರತೀಯ ಭೂ ಸೇನೆಯ ನಿವೃತ್ತ ಯೋಧ, ಯಜ್ಞ ನಾರಾಯಣ ರಾವ್(೮೪) ಅವರು ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.೧೯೫೯ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದ ಅವರು ೧೯೭೧ರಲ್ಲಿ ಇಂಡೋ ಪಾಕ್ ಯುದ್ಧ ಸೇರಿದಂತೆ ಸ್ವಾತಂತ್ರ‍್ಯಾನಂತರದಲ್ಲಿ ನಡೆದ ಮೂರು ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. ಭೂಸೇನೆಯಲ್ಲಿ ಸುಬೇದಾರ್ ಪದವಿ ಪಡೆದ ಅವರು ಸುಮಾರು ೯ ವರ್ಷಗಳ ಕಾಲ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಅಂಗರಕ್ಷಕ ಪಡೆಯ ಮುಖ್ಯಸ್ಥರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.0209ks21 ph narayana rao

೧೯೮೬ರಲ್ಲಿ ಸೇನೆಯಿಂದ ನಿವೃತ್ತರಾಗಿದ್ದು ಬಳಿಕ ನರಿಕೊಂಬಿನ ಕೋಮೆಯಲ್ಲಿ ಕೃಷಿ ಕಾರ್ಯವನ್ನು ನಡೆಸುತ್ತಿದ್ದು, ೮೦ರ ಹರೆಯದಲ್ಲೂ ಭತ್ತದ ಬೇಸಾಯದಲ್ಲಿ ಸಕ್ರೀಯರಾಗಿದ್ದರು. ಪಾವಂಜೆ ಕ್ಷೇತ್ರದಲ್ಲಿ ನಡೆದ ಯಾಗದ ಸಂದರ್ಭದ ಸಮ್ಮಾನ ಸೇರಿದಂತೆ ಹಲವು ಪ್ರಶಸ್ತಿ ಸಮ್ಮಾನಗಳನ್ನು ಪಡೆದಿದ್ದಾರೆ.

By Suddi9

Leave a Reply

Your email address will not be published. Required fields are marked *