ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವಿಟ್ಲ, ಕಲ್ಲಡ್ಕ ವಲಯದ ಗೋಳ್ತಮಜಲು ಬಿ. ಒಕ್ಕೂಟದ ಶಿವಪಾರ್ವತಿ ಜ್ಞಾನವಿಕಾಸ ಕೇಂದ್ರದ ಪೌಷ್ಠಿಕ ಆಹಾರ ಮೇಳ ಕಾರ್ಯಕ್ರಮ  ನವಜೀವನ ಸಮಿತಿ ಸದಸ್ಯರಾದ  ದೇವಪ್ಪ ನೆಟ್ಲ ರವರ ಮನೆಯ ಪ್ರಾಂಗಣದಲ್ಲಿ ನಡೆಯಿತು.
IMG-20200831-WA0046
ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲ ಜೆ. ಸಿ ಸ್ಕೂಲ್ ನ ಶಿಕ್ಷಕಿ ಶಶಿಕಲಾರವರು ನೆರವೇರಿಸಿ. ಪೌಷ್ಠಿಕ ಆಹಾರದ ಮಹತ್ವದಲ್ಲಿ ಮಹಿಳೆಯ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಯೋಜನಾಧಿಕಾರಿ  ಸರಸ್ವತಿ ಯವರು ಪೌಷ್ಠಿಕ ಆಹಾರ ತಯಾರಿಕೆ, ಪೌಷ್ಠಿಕ ಆಹಾರಗಳ  ಹಾಗೂ ಬೆಳವಣಿಗೆಗೆ ಪೂರಕವಾದ ಪೌಷ್ಠಿಕಯುಕ್ತ ಆಹಾರ ಸೇವನೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಅಧ್ಯಕ್ಷೆ  ರುಕ್ಮಿಣಿಯವರು ವಹಿಸಿದ್ದರು ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ  ನಳಿನಾಕ್ಷಿ ಶೆಟ್ಟಿ, ಮೇಲ್ವಿಚಾರಕರಾದ  ಪ್ರೇಮ, ಸೇವಾಪ್ರತಿನಿಧಿ  ಮಾಲತಿ ಒಕ್ಕೂಟದ ಪದಾಧಿಕಾರಿಗಳಾದ  ಗೀತಾ,  ಪ್ರೇಮರವರು ಉಪಸ್ಥಿತರಿದ್ದರು..  ಸುರೇಖರವರು ಸ್ವಾಗತಿಸಿ , ರಾಜೇಶ್ವರಿಯವರು ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು.

By suddi9

Leave a Reply

Your email address will not be published. Required fields are marked *