ಬಂಟ್ವಾಳ : ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿರುವ ಕರಾಳ ಡ್ರಗ್ಸ್ ದಂಧೆ ನಡೆಸುವವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕ ಆಗ್ರಹಿಸಿದೆ. ಈ ಸಂಬಂಧ ಶುಕ್ರವಾರ ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಆಶಿಶ್ ಅಜ್ಜಿಬೆಟ್ಟು ನೇತೃತ್ವದ ನಿಯೋಗ ಬಂಟ್ವಾಳ ಉಪತಹಶಿಲ್ದಾರರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿತು .
ಅ.ಭಾ.ವಿ.ಪ ತಾಲೂಕು ಸಂಚಾಲಕರಾದ ಹರ್ಷಿತ್ ಕೊಯಿಲ, ನಗರ ಕಾರ್ಯದರ್ಶಿಯಾದ ಅಖಿಲಾಷ್ ,ನಗರ ಸಹಕಾರ್ಯದರ್ಶಿಗಳಾದ ನಾಗರಾಜ್ ಶೆಣೈ, ಸಚಿನ್ , ಗಗನ್, ಅನೀಶ್ ಚೇಳೂರು,ಸಂದೇಶ್,ಭರತ್ ಗಟ್ಟಿ,ರಂಜಿತ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
