ಕೈಕಂಬ: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಮುಧೋಳ ನಾಯಿಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕುಪ್ಪೆಪದವು ಮಾಂಗ್ಲಿಚ್ಚಾರ್ ಸೈಟ್ ನಿವಾಸಿ ರಂಜಿತ್ ಎಂಬಾತನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ದೂರು ದಾಖಲಿಸಿದೆ.
ಇತ್ತೀಚೆಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿಯವರು ಮುಧೋಳ ತಳಿಯ ನಾಯಿಗಳ ಬಗ್ಗೆ ಮಾತನಾಡಿದ್ದರು. ಇದರ ಬಗ್ಗೆ ರಂಜಿತ್ ಎಂಬಾತ ಟಿವಿ ಚಾನಲ್ ಒಂದರ ಫೇಸ್ ಬುಕ್ ಪೇಜ್ ನಲ್ಲಿ ಮೋದಿಯವರ ಚಿತ್ರದ ಜತೆ ಮುಧೋಳ್ ನಾಯಿಯ ಚಿತ್ರವನ್ನು ಹಾಕಿ ಕಾಮೆಂಟ್ ಪೋಸ್ಟ್ ಮಾಡಿದ್ದ.ದೇಶದ ಪ್ರಧಾನಮಂತ್ರಿಗಳನ್ನು ಅಪಮಾನಿಸಿರುವ ರಂಜಿತ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಜನತಾ ಪಕ್ಷದ ಎಡಪದವು ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಬಜಪೆ ಪೊಲೀಸ ಠಾಣೆಗೆ ದೂರು ನೀಡಿದ್ದಾರೆ. ಶಕ್ತಿಕೇಂದ್ರದ ಅಧ್ಯಕ್ಷ ಪ್ರಸಾದ್ ಎಂ. ಪ್ರಧಾನ ಕಾರ್ಯದರ್ಶಿ ಅನಿಲ್ ಪೆರಾರ, ಬಿಜೆಪಿ ಉತ್ತರ ಮಂಡಲ ಕಾರ್ಯದರ್ಶಿ ಗಣೇಶ್ ಪಾಕಜೆ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಮಿತಾ ಶೆಟ್ಟಿ, ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ ದೇವಾಡಿಗ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಮಿಜಾರ್, ಮುಖಂಡರುಗಳಾದ ಕಾಶೀನಾಥ್ ಕಾಮತ್, ಜಯಂತ್, ಅನುರಾಜ್, ಮೊದಲಾದವರಿದ್ದರು.
