ಕೈಕಂಬ: ಪ್ರದಾನಮಂತ್ರಿ ಜನೌಷಧಿ ಕೇಂದ್ರವನ್ನು ಗಂಜಿಮಠದಲ್ಲಿ ಆ.31ರಂದು ಸೋಮವಾರ ಉದ್ಘಾಟನೆಗೊಂಡಿತು. ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಹಾಗೂ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿ ಡಾ. ಚೇತನ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೇಷ್ಟ ಗುಣಮಟ್ಟದ 900ಕ್ಕೂ ಅಧಿಕ ಔಷಧಿಗಳು ಕಡಿಮೆ ಬೆಲೆಗಳಲ್ಲಿ ಗ್ರಾಹಕರಿಗೆ ಲಭ್ಯವಿರುವುದಾಗಿ ಎಂದು ಜನೌಷಧಿ ಕೇಂದ್ರದ ವ್ಯವಸ್ಥಪಕರು ತಿಳಿಸಿದ್ದಾರೆ.


