ಮುಂಬಯಿ: ಸುಮಾರು ಮೂರು ದಶಕಗಳಿಂದ ಕರ್ನಾಟಕ ರಾಜ್ಯದ ಜನತೆಗೆ ಬೇಕಾಗಿ ಬಹರೈನ್ ನಲ್ಲಿ ದುಡಿಯುತ್ತಿರುವ ಸಂಸ್ಥೆದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಆಗಿದೆ. ಇದೊಂದು ಮಾನವೀಯ ನೆಲೆಗಟ್ಟಿನ ಕಾರ್ಯಕ್ರಮ. ಈ ವರ್ಷಗಲ್ಲಿಬೇರೆಬೇರೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿರುವ ಈ ಸಂಸ್ಥೆ ಸಮಾಜದ ದೀನದಲಿತರ ಬಗ್ಗೆ ಸ್ಪಂದಿಸುವ ಕೆಲಸ ಸದಾ ಮಾಡುತ್ತಿದೆ. ನೊಂದವರ ಬಾಳಿಗೆ ಬೆಳಕಾಗುವ ಕೆಲಸ ಶ್ಲಾಘನೀಯ ಎಂದು ಕರ್ನಾಟಕ ಎನ್‍ಅಆರ್‍ಐ ಫೋರಂ ಬಹರೈನ್ ಇದರಅಧ್ಯಕ್ಷ ಲೀಲಾಧರ ಬೈಕಂಪಾಡಿ ಅಭಿಪ್ರಾಯ ಪಟ್ಟರು.IMG-20200830-WA0183

IMG-20200830-WA0173ದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಬಹರೈನ್ ಸಂಸ್ಥೆಯು ಮಂಗಳೂರು ನಗರದ ವೆಲೆನ್ಸಿಯಾ ಇಲ್ಲಿನ ಕೋಟೆ ಮ್ಯಾನ್ಷನ್‍ನಲ್ಲಿ ಕಳೆದ ಭಾನುವಾರ ಜರುಗಿಸಿದ ಕೋವಿಡ್-19 ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬೈಕಂಪಾಡಿಮಾತನಾಡಿ ಸುಮಾರು 100 ಜನರಿಗೆ ಕಿಟ್ ಗಳನ್ನು ವಿತರಿದರು.IMG-20200830-WA0180

IMG-20200830-WA0181ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕಾಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಮಾತನಾಡಿ ಕೋವಿಡ್ ಪ್ರಾರಂಭದಲ್ಲಿ ಹೆಚ್ಚಿನ ಸಂಘ ಸಂಸ್ಥೆಗಳು ಅಹಾರ ಕಿಟ್ ಹಂಚಿದೆ ಅದರೆ ದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಕೋವಿಡ್ ಪ್ರಾರಂಭದಿಂದ ಇಂದಿನ ವರೆಗೆ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇದು ನಿಜವಾದ ಸೇವೆಯಾಗಿದೆ ಎಂದು ಹೇಳಿದರು.IMG-20200830-WA0178

ಎಂಸಿಸಿ ಮಾಜಿ ಉಪಮೇಯರ್ ಸಲೀಂ, ದ.ಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್‍ನ ಉಪಾಧ್ಯಕ್ಷ ಉಮ್ಮರ್, ಸ್ಥಾಪಕ ಸದಸ್ಯ ಮೊದ್ದೀನ್ ಅತಿಥಿü ಅಭ್ಯಾಗತರುಗಳಾಗಿದ್ದುಎಂಸಿಸಿ ಮಾಜಿ ಮೇಯರ್ ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೆ ಪ್ರಚಾರವಿಲ್ಲದೆ ಶಿರೂರುನಿಂದ ಗ್ರಾಮಿಣ ಪ್ರದೇಶವಾದ ಬೆಳ್ತಂಗಡಿ ಭಾಗದ ಬಡ ಅರ್ಹರಿಗೆ ನಿರಂತರವಾಗಿ ಸಹಾಯ ಮಾಡುತ್ತ ಬಂದಿದೆ ಇದು ಒಂದು ಮಾದರಿ ಸಂಸ್ಥೆಯಾಗಿದೆ ಎಂದು ಹೇಳಿದರು.IMG-20200830-WA0184

ಕಾರ್ಯಕ್ರಮ ಸಂಯೋಜಕ ಮುಬಾರಕ್ ವೇದಿಕೆಯಲ್ಲಿದ್ದು ಬಂದರು ವ್ಯಾಪಾರಿ ಮೊಹಿಸಿನ್ ಬಾವ ಸ್ವಾಗತಿಸದರು. ಸಾಹಿತಿ ಡಾ| ಕಾಸರಗೋಡು ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಯ್ಯದ್ ಬಹರೈನ್ ವಂದಿಸಿದರು.

By Suddi9

Leave a Reply

Your email address will not be published. Required fields are marked *