ಅಡ್ಡೂರು : ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜ ಆ. 31ರಂದು ಅಡ್ಡೂರು ಜಂಕ್ಷನ್‍ನಲ್ಲಿರುವ ರಿಕ್ಷಾ ಸ್ಟೇಂಡ್‍ಗೆ ಇಂಟರ್‍ಲಾಕ್ ಅಳವಡಿಸಲು ಶಾಸಕ ನಿಧಿಯಿಂದ ತೆಗೆದಿರಿಸಲಾಗಿದ್ದ ಎರಡು ಲಕ್ಷ ರೂ ಅನುದಾನದಲ್ಲಿ ಶಿಲಾನ್ಯಾಸಗೈದರು.ಐವನ್ ಅವರು ಎಂಎಲ್‍ಸಿಯಾಗಿರುವಾಗ  ಇಂಟರ್‍ಲಾಕ್ ಕಾಮಗಾರಿ ನಡೆಯಲಿದೆ.gur-aug-31-ivan-1

ರಿಕ್ಷಾ ಚಾಲಕರು ಊರಿನ ರಾಯಭಾರಿಗಳಂತಿರುವ ರಿಕ್ಷಾ ಚಾಲಕರಿಗೆ ಸಮಾಜದಲ್ಲಿ ಉತ್ತಮ ಗೌರವ ಸಿಗಬೇಕು. ವಿಧಾನ ಪರಿಷತ್ತಿನಲ್ಲೂ ರಿಕ್ಷಾ-ಕಾರು ಚಾಲಕ ಮಾಲಕರ ಧ್ವನಿಯಾಗಿದ್ದ ತಾನು, ಕೋವಿಡ್ ಸಂದರ್ಭದಲ್ಲಿ ದುಡಿಯುವ ವರ್ಗದ ರಿಕ್ಷಾ ಚಾಲಕರಿಗೆ ಸರ್ಕಾರದ ನೆರವು ಕೋರಿದ್ದೇನೆ ಎಂದರು.gur-aug-31-ivan-3

ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಸ್ವಾಗತಿಸಿ ಸಂದರ್ಭೋಚಿತ ಮಾತನಾಡಿದರು. ತಾಪಂ ಸದಸ್ಯ ಸಚಿನ್ ಅಡಪ, ಕೆಪಿಸಿಸಿ ಸದಸ್ಯ ಪೃಥ್ವೀರಾಜ್, ಅಡ್ಡೂರು ರಿಕ್ಷಾ ಚಾಲಕನ ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಜಲೀಲ್, ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಮಾಜಿ ಸದಸ್ಯರಾದ ಎ ಕೆ ಮುಹಮ್ಮದ್, ಅಹ್ಮದ್ ಬಾವ ಹಾಗೂ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ, ಉಪಾಧ್ಯಕ್ಷ ಜೈನುದ್ದಿನ್ ಹಾಗೂ ರಿಕ್ಷಾ ಚಾಲಕ-ಮಾಲಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *