ಗುರುಪುರ: ಗ್ರಾಮೀಣ ಭಾಗದ ಹಿತ್ತಲ ಗಿಡ ಮದ್ದಿಗೆ ಭಾರೀ ಬೇಡಿಕೆ ಇದೆ ಎಂಬುದು ಪ್ರಸಕ್ತ ಕೊರೊನಾ ಮಹಾಮಾರಿಯಿಂದ ಎಲ್ಲರಿಗೂ ಚಿರಪರಿಚಿತವಾಗಿದಂತು ಸತ್ಯ. ಇಲ್ಲೊಬ್ಬರು ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಯೋಗೀಶ್ ಪೂಜಾರಿ ಕಳೆದ ಮೂರು ತಿಂಗಳಿಂದ ಕೆಲಸಕ್ಕೆ ಹೋಗುವಾಗ ತನ್ನ ಮನೆ ಸುತ್ತಮುತ್ತ ಲಭ್ಯವಿರುವ ಕೆಲವು ಔಷಧೀಯ ಸಸ್ಯಗಳನ್ನು ಸ್ಕೂಟರಿಗೆ ಕಟ್ಟಿಕೊಂಡು ಹೋಗುತ್ತಲೇ, ಆಸಕ್ತಿಯುಳ್ಳವರಿಗೆ ಈ ಸಸ್ಯಗಳ ಪ್ರಯೋಜನ ಮತ್ತು ಬಳಕೆ ಮಾಹಿತಿ ನೀಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ .ಇವರು ಗುರುಪುರ ಪೇಟೆಯ  ವನಭೋಜನ ಎಂಬಲ್ಲಿನ ನಿವಾಸಿ, gur-aug-29-yogish-2

ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವನ್ನು ಬೆಳೆಸಿಕೊಳ್ಳುವ ರೂಡಿ ಇದ್ದು  ಇವರು  ಪರಿಸರದಿಂದ ಪ್ರೇರಿತರಾಗಿ  ಮನೆಯ ಸುತ್ತಮುತ್ತ ಇರುವ ಔಷಧೀಯ ಗಿಡಗಳ ಮಹತ್ವ ತಿಳಿಸಲು ಈ ರೀತಿಯಾಗಿ ಅಳಲಿ ಸೇವೆ ಮಾಡುತ್ತಿದ್ದಾರೆ. ಮಗನ ಈ ಕೆಲಸಕ್ಕೆ ತಾಯಿ ಜಯಂತಿ ಪ್ರೋತ್ಸಾಹ ನೀಡುತ್ತಿದ್ದು, ಇವರು ತನ್ನ ಅಜ್ಜನಿಂದ ಔಷಧೀಯ ಗುಣವಿರುವ ಸಸ್ಯಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ಪೂಜಾರಿಯವರು ಸ್ಕೂಟರಿಗೆ ಪ್ರತಿನಿತ್ಯ ಬಗೆಬಗೆಯ ಔಷಧೀಯ ಸಸ್ಯ ಕಟ್ಟಿಕೊಂಡು ನೀರುಮಾರ್ಗ, ಶಕ್ತಿನಗರ, ವಾಮಂಜೂರು ಹಾಗೂ ಗುರುಪುರ-ಕೈಕಂಬ ಸುತ್ತಮುತ್ತ ಕೆಲಸಕ್ಕೆ ಹೋಗುತ್ತಾರೆ. ಈ ವೇಳೆ ಸ್ಕೂಟರಿನಲ್ಲಿ ತುಳಸಿ, ಎಕ್ಕಮಾಲೆ, ನೆಲನೆಲ್ಲಿ(ಬಿಳಿ), ಅಮೃತಬಳ್ಳಿ, ಕದಿಕೆ ಹಾಗೂ ಪಚ್ಚೆಕುರಲ್, ಗೋರಂಟಿ, ರಥಹೂ, ಕೇಪುಳದಂತಹ ಅಪೂರ್ವ ಹೂವುಗಳು ಕಾಣಸಿಗುತ್ತವೆ.

“ಕೆಲವರು ನನ್ನನ್ನು ನೋಡಿ ನಗುತ್ತಾರೆ. ಇನ್ನು ಕೆಲವರು ಸ್ಕೂಟರ್ ನಿಲ್ಲಿಸಿ ಈ ಸಸ್ಯಗಳ ಪ್ರಯೋಜನ ಕೇಳಿ ತಿಳಿಯುತ್ತಾರೆ. ಅಗತ್ಯವಿದ್ದವರಿಗೆ ಉಚಿತವಾಗಿ ಕೊಡುತ್ತೇನೆ. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಲ್ಲಿ ನಾಟಿ ಸಸ್ಯಗಳಿಗೆ ಸಾಟಿ ಬೇರೆ ಯಾವುದೂ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು” ಎಂದು ಯೋಗೀಶ್ ಪೂಜಾರಿ ಹೇಳುತ್ತಾರೆ.

By suddi9

Leave a Reply

Your email address will not be published. Required fields are marked *