ಬಂಟ್ವಾಳ: ಹ್ಯೂಮನ್ ವೆಲ್ಫೇರ್ ಫೌಂಡೇಶನ್   ವತಿಯಿಂದ ಎಸ್ ಎಸ್ ಎಲ್ ಸಿ., ಪಿಯುಸಿಯ ಬಳಿಕ ಮುಂದೇನು? ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮ ಅಮ್ಮುಂಜೆ ಅನದಾನಿತ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಬಂಟ್ವಾಳ ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್  ನಶ್ರೀನ್  ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

IMG-20200831-WA0022
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಸ್ಥಾಪಕಾಧ್ಯಕ್ಷರಾದ ಇಬ್ರಾಹಿಂ ನವಾಝ್ ವಹಿಸಿದ್ದರು.   ಶಿಕ್ಷಣ ತಜ್ಞ  ರಫೀಕ್ ಮಾಸ್ಟರ್ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿಧ್ಯಾರ್ಥಿಗಳಿಗೆ ತರಬೇತಿ ನೀಡಿದರು.  ಸಹ್ಯಾದ್ರಿ ಇಂಜಿನಿಯರ್ ಕಾಲೇಜು ಇದರ ನಿರ್ದೇಶಕರಾದ ದೇವ್’ದಾಸ್ ಬಿಇ.,ಮಂಗಳೂರು ಮನಪಾ ಸಹಾಯಕ ಇಂಜಿನಿಯರ್ ಅಬ್ದುಲ್ ಖಾದರ್,  ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯ ಅಬೂಬಕ್ಕರ್ ಅಮ್ಮುಂಜೆಅವರು ಮುಖ್ಯ ಅತಿಥಿಗಳಾಗಿದ್ದರು.IMG-20200831-WA0020

ಇದೇವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳ ಸಹಿತ  ಕಾಲಿನಲ್ಲಿ ಎಸ್ಸಸ್ಸೆಲ್ಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ಕೌಶಿಕ್ ಆಚಾರ್ಯರವರನ್ನು ಸನ್ಮಾನಿಸಲಾಯಿತು.ಅಮುಂಜೆ  ಗ್ರಾಮ ಪಂಚಾಯತ್ ನಿಕಪೂರ್ವ ಅಧ್ಯಕ್ಷರಾದ ಪ್ರೇಮಲತಾ,ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಮಜೀದ್ ಮುಡೈಕೋಡಿ,ಚಂದ್ರಶೇಖರ್ ಭಂಡಾರಿ ಕಲಾಯಿ ಕೆ.ಎಂ ಅಬೂಬಕ್ಕರ್ ಅಮ್ಮುಂಜೆ, ಅಮ್ಮುಂಜೆ  ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಅಬ್ದುಲ್ ರಝಾಕ್ ಕಲಾಯಿ, ಹರೀಶ್ ಅಮ್ಮುಂಜೆ,ಬಿ.ಎ ಹಮೀದ್ ಮುಡೈಕೋಡಿ, ನವಾಝ್ ಮುಡೈಕೋಡಿ, ಫೌಂಡೇಶನ್ ನ ಸಲಹೆಗಾರದ ಬಶೀರ್ ಅಹ್ಮದ್ ಗಾಣೆಮಾರ್,ಸಂಸ್ಥೆಯ ಕಾರ್ಯಧ್ಯಕ್ಷ ಅಲ್ತಾಫ್ ಪಂಚಮೆ, ಉಪಾಧ್ಯಕ್ಷ  ರಮ್ಲಾನ್  ಕಲಾಯಿ, ಸಂಘಟನಾ ಕಾರ್ಯದರ್ಶಿ ಶರೀಫ್ ಬಡಕಬೈಲ್ ನಾಸಿರ್ ಕಲಾಯಿ, ಹನೀಫ್ ಕಲಾಯಿ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಮಿತಿಯ ಸಲಹೆಗಾರರಾದ ಹಕೀಮ್ ತಾಳಿಪ್ಪಾಡಿ ರವರು ಸ್ವಾಗತಿಸಿದರು ಸಮಿತಿಯ ಪ್ರ.ಕಾರ್ಯದರ್ಶಿ ಆರಿಫ್ ಕಮ್ಮಾಜೆ ವಿಷಯ ಮಂಡಿಸಿದರು.  ಸಮಿತಿ ಕೋಶಧಿಕಾರಿ ಹಮೀದ್ ವರಕೋಡಿ  ನಿರೂಪಿಸಿದರು.

By suddi9

Leave a Reply

Your email address will not be published. Required fields are marked *