ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ಉಪ್ಪುಗುಡ್ಡೆ ಪ್ರದೇಶದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ರವಿವಾರ ನೆರವೇರಿಸಲಾಯಿತು.    ತಾಲೂಕು ಪಂಚಾಯತ್ ಸದಸ್ಯೆ  ಗಾಯತ್ರಿ ರವೀಂದ್ರ ಸಪಲ್ಯ ರವರಿಗೆ  15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾದ 2 ಲಕ್ಷ ಹಾಗೂ  ಪಂಚಾಯತ್ ಸದಸ್ಯರಾದ  ರವೀಂದ್ರ ಸಪಲ್ಯ ಮತ್ತು ಚಂದ್ರಾವತಿ ರತ್ನಕಾರ ನಾಯ್ಕ ರವರಿಗೆ ಮಂಜೂರಾದ 1ಲಕ್ಷ ರೂ. ಅನುದಾನದಲ್ಲಿ  ಕಾಂಕ್ರೆಟ್ ರಸ್ತೆ ನಿರ್ಮಾಣಕ್ಕೆ ಮಾಜಿ  ಸಚಿವರಾದ ಬಿ.ರಮಾನಾಥ ರೈ ಯವರು ಗುದ್ದಲಿ ಪೂಜೆ ನೆರೆವೇರಿಸಿದರು. ಹಾಗೆಯೇ 14ನೇ ಹಣಕಾಸು ಯೋಜನೆಯಲ್ಲಿ 1.70 ಲಕ್ಷ ವೆಚ್ಚದಲ್ಲಿ  ಮಹಮ್ಮದ್ ಬಶೀರ್ ರವರ ಮನೆ ಬಳಿ ಸಾರ್ವಜನಿಕ ಬಾವಿಯನ್ನು ಉದ್ಘಾಟನೆಯನ್ನು  ನೆರೆವೇರಿಸಲಾಯಿತು.

IMG-20200830-WA0034

IMG-20200830-WA0028ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ  ಗಾಯತ್ರಿ ರವೀಂದ್ರ ಸಪಲ್ಯ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಮಾಧವ ಕರ್ಬೆಟ್ಟು, ರವೀಂದ್ರ ಸಪಲ್ಯ,ಚಂದ್ರಾವತಿ ರತ್ನಕಾರ ನಾಯ್ಕ, ಬೂತ್ ಅಧ್ಯಕ್ಷರಾದ ಅಬ್ಬುಬಕ್ಕರ್ ಉಪ್ಪುಗುಡ್ಡೆ, ಪ್ರಮುಖರಾದ ಅಹಮದ್ ಭಾವ, ಹಮದ್ ಹಾಜಿ, ಇಸ್ಮಾಯಿಲ್ ಆಲಡ್ಕ, ಇಸ್ಮಾಯಿಲ್ ಉಪ್ಪುಗುಡ್ಡೆ, ಅರುಣ್ ಶೆಟ್ಟಿ ಅಂತರ, ಹರೀಶ್ ಕೆ, ಪಿ ಎಸ್ ಅಬ್ದುಲ್  ಹಮೀದ್, ಗುತ್ತಿಗೆದಾರ ಅಬ್ದುಲ್ ಲತೀಫ್   ಮೊದಲಾದವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *