ಬಂಟ್ವಾಳ : ಪೆರಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನವನ್ನು  ಶನಿವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು. ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತನಾದರೆ ದೇಶವೇ ಆರೋಗ್ಯವಂತ ದೇಶವಾಗುತ್ತದೆ. ಆರೋಗ್ಯದ ಬಗ್ಗೆ ಗಮನ ನೀಡುವುದು ಅಗತ್ಯವಾಗಿದ್ದು ಕೇಂದ್ರ ಸರಕಾರದ ಆಯುಷ್ಮಾನ್ ಕಾರ್ಡು ಪ್ರತಿಯೊಬ್ಬರಿಗೂ ಆಪತ್ಕಾಲದಲ್ಲಿ ಸಹಕಾರಿಯಾಗುತ್ತದೆ ಎಂದು ಶಾಸಕರು ಶುಭ ಹಾರೈಸಿದರು.IMG-20200829-WA0013

ನೇರಳೆಕಟ್ಟೆ ಸಿ.ಎ ಬ್ಯಾಂಕ್ ಅಧ್ಯಕ್ಷ  ಪುಷ್ಪರಾಜ್ ಚೌಟ, ಮಾಣಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸನತ್ ಕುಮಾರ್ ರೈ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜಿ, ಹಿರಿಯರಾದ ಬಿ.ಟಿ. ನಾರಾಯಣ ಭಟ್, ನಾರಾಯಣ ಶೆಟ್ಟಿ ತೋಟ ಮಾಣಿ, ಗ್ರಾ.ಪಂ ಸದಸ್ಯ ಉಮೇಶ ಎಸ್.ಪಿ., ಬೂತ್ ಸಮಿತಿ ಅಧ್ಯಕ್ಷ ರಾಜಾರಾಮ ಕಾಡೂರು ,ಜಿಲ್ಲಾ ಯುವ ಮೋರ್ಚಾದ ವಿನೀತ್ ಶೆಟ್ಟಿ, ತಾಲೂಕು  ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೀಮಾ ಮಾಧವ, ಉಪಾಧ್ಯಕ್ಷರಾದ ಲಖಿತ ಆರ್.ಶೆಟ್ಟಿ, ಹಿರಣ್ಮಯಿ ಕಲ್ಲಡ್ಕ, ಹರೀಶ್ ರೈ ಪಾನೂರು ,ಶ್ರೀನಿವಾಸ ಪೂಜಾರಿ , ರಾಘವ ಏನಾಜೆ, ಹಿಂದು ಜಾಗರಣ ವೇದಿಕೆ ವಿಭಾಗ ಸಂಪರ್ಕ ಪ್ರಮುಖ ರತ್ನಾಕರ ಶೆಟ್ಟಿ ಕಲ್ಲಡ್ಕ ಹಾಗೂ ಬಿಜೆಪಿ ಯುವ ಮೋರ್ಚ ಮತ್ತು ಮಹಿಳಾ ಮೋರ್ಚದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *