ಬಂಟ್ವಾಳ :  ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ನಿಟ್ಟಿನಲ್ಲಿ ಬಂಟ್ವಾಳ  ಬ್ಲಾಕ್ ಕಾಂಗ್ರೆಸ್ ನಿಂದ ಬಡಗಕಜೆಕಾರು ಗ್ರಾಮ ಪಂಚಾಯತ್  ವ್ಯಾಪ್ತಿಯಲ್ಲಿ  ಚುನಾವಣೆಯ ಪೂರ್ವಭಾವಿ ಸಭೆಯು ಪಾಂಡವರಕಲ್ಲು ಸಭಾಭವನದಲ್ಲಿ ನಡೆಯಿತು.  ಮಾಜಿ ಸಚಿವ ಬಿ ರಮಾನಾಥ ರೈ ಯವರ ನಿರ್ದೆಶನದಂತೆ    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ   ಸ್ವರ್ದಿಸಲಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.IMG-20200828-WA0014

ಚುನಾವಣೆಯಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯರೂಪಿಸುವ ಮಖಾಂತರ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸಭೆಯಲ್ಲಿ ನಿರ್ಣಾಯಿಸಲಾಯಿತು.ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರುಗಳಾದ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯನ್, ಸಂಪತ್ ಕುಮಾರ್ ಶೆಟ್ಟಿ, ಜಗದೀಶ್ ಕೊಯಿಲ, ಜನಾರ್ಧನ ಚೆಂಡ್ತಿಮಾರ್, ಎಪ್ರೀಯಂ ಸಿಕ್ವೇರಾ, ಮಹಮ್ಮದ್ ಸಂಗಬೆಟ್ಟು, ವಲಯ ಕಾಂಗ್ರೆಸ್ ಅಧ್ಯಕ್ಷ ಜಯ ಬಂಗೇರ ಪಕ್ಷದ ಮಖಂಡರಾದ ಡೀಕಯ್ಯ ಬಂಗೇರ ಕರ್ಲ, ಸತೀಶ್ ಚಂದ್ರ ಕೆ ಎ, ವಸಂತ ಪೂಜಾರಿ, ಅಬ್ದುಲ್ಲಾ ಅಂಗಡಿ, ಕೇಶವ ಮಜಲು, ವಿರೇಂದ್ರ ಜೈನ್, ಆನಂದ ಕರ್ಲ, ದಿವಾಕರ್ ಕರ್ಲ, ವಿಶ್ವನಾಥ ಪೂಜಾರಿ ಕುತ್ತಾಡಿ, ಅಬೂಬಕ್ಕರ್ ಕೆದಿಲೆ, ಸುದಾಕರ್ ಶೆಣೈ ಕಂಡಿಗ ಉಪಸ್ಥಿತ್ತರಿದ್ದರು.

By suddi9

Leave a Reply

Your email address will not be published. Required fields are marked *