ಬಂಟ್ವಾಳ: ತಾಲೂಕಿನ ಮಣಿನಾಲ್ಕೂರುಗ್ರಾಮದ ನಡುಮೊಗರು ಎಂಬಲ್ಲಿ ಸ್ಥಳೀಯ ಗ್ರಾಪಂನ ನಿಕಟಪೂರ್ವ ಸದಸ್ಯ ಆದಂಕುಂಞ ಅವರ ಮನೆಯ ದಾಸ್ತಾನುಕೊಠಡಿ ಬೆಂಕಿಗಾಹುತಿಯಾದ ಘಟನೆ ರವಿವಾರ ಸಂಜೆ ಸಂಭವಿಸಿದ್ದು, ಲಕ್ಷಾಂತರ ರೂ.ನಷ್ಟ ಉಂಟಾಗಿದೆ.
ಮನೆಗೆ ತಾಗಿಕೊಂಡಿರುವ ದಾಸ್ತಾನುಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಅಡಕೆ,ತೆಂಗಿನಕಾಯಿ, ಮರಮಟ್ಟಗಳು ಹಾಗೂ ಕೃಷಿಯಂತ್ರೋಪಕರಣ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿಯ ಕೆನ್ನಾಲಗೆ ಅಲ್ಲಿಯೇ ಇದ್ದ ದನದಕೊಟ್ಟಿಗೆಗೂ ತಗುಲಿದ್ದು,ದನದ ಕೊಟ್ಟಿಗೆ ಕೂಡ ಸಂಪೂರ್ಣಸುಟ್ಟಿದ್ದು,ಅದರಲ್ಲಿದ್ದ ಜಾನುವಾರು ಹೊರಗಡೆ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದೆ.
ಸುದ್ದಿ ತಿಳಿದ ಬಂಟ್ವಾಳ ಆಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.ಈ ಘಟನೆಯಿಂದ ಸುಮಾರು 10 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗ್ರಾಮಕರಣಿಕ ಚೆನ್ನಬಸಪ್ಪ ಅವರು ಸ್ಥಳಕ್ಕಾಗಮಿಸಿ ನಷ್ಟವನ್ನು ಅಂದಾಜಿಸಿದ್ದಾರೆ.ಮಾಜಿ ಸಚಿವ ಬಿ.ರಮಾನಾಥ ರೈ,ಜಿಪಂ ಸದಸ್ಯ ಪದ್ಮಶೇಖರ ಜೈನ್,ಬಂಟ್ವಾಳ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಬೇಬಿಕುಂದರ್ ಮೊದಲಾದವರು ಅಗಮಿಸಿ ಪರಿಶೀಲಿಸಿದ್ದಾರೆ. ವಿದ್ಯುತ್ ಶಾಟ್೯ ಸಕ್ಯೂ ೯ಟ್ ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿರಬೇಕೆಂದು ಶಂಕಿಸಲಾಗಿದೆ.
