ಬಂಟ್ವಾಳ: ಕಾಲ ಬೆರಳಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ರಾಜ್ಯದ ಶಿಕ್ಷಣ ಸಚಿವರ ಸಹಿತ ಜನರ ಗಮನ ಸೆಳೆದಿದ್ದ ಬಂಟ್ವಾಳ ಕಂಚಿಕಾರ ಪೇಟೆಯ ಕೌಶಿಕ್ ಸೋಮವಾರ ಮೂಡಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿಗೆ ದಾಖಲಾಗಿದ್ದಾನೆ. 
ಕೌಶಿಕ್ ನ ಮುಂದಿನ ವಿದ್ಯಾಭ್ಯಾಸಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಜ್ ಉಳಿಪ್ಪಾಡಿಗುತ್ತು ಅವರು ನೀಡಿದ ಭರವಸೆಯಂತೆ ಕೌಶಿಕ್ ಅವರಿಗೆ ನೆರವಾಗಿದ್ದು,ಮೂಡಬಿದಿರೆಯ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ಡಾ.ಮೋಹನ್ ಆಳ್ವ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು ಶಿಕ್ಷಣಕ್ಕೆ ದಾಖಲಾತಿ ವ್ಯವಸ್ಥೆಗೆ ಕ್ರಮಕೈಗೊಂಡಿದ್ದಾರೆ.ಶಾಸಕರ ಕೋರಿಕೆಯಂತೆ ಮೋಹನ್ ಆಳ್ವ ಅವರು ಕೌಶಿಕ್ ಆಸೆಯಂತೆ ತಮ್ಮ ಸಂಸ್ಥೆಯ ವಾಣಿಜ್ಯ ವಿಭಾಗದಲ್ಲಿ ದಾಖಲಿಸಿದ್ದಾರೆ.
ಕೊಟ್ಟ ಮಾತು ಉಳಿಸಿದ ಶಾಸಕರು:
ಕಾಲಿನ ಬೆರಳಿನ ಮೂಲಕ ಎಸ್.ಎಸ್ .ಎಲ್.ಸಿ.ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾದ ಸಂದರ್ಭದಲ್ಲಿ ಕೌಶಿಕ್ ನ ಫಲಿತಾಂಶವನ್ನು ನೋಡಿಕೊಂಡು ಆತನ ಇಚ್ಚೆ ಯ ವಿಷಯದಲ್ಲಿ ಮುಂದಿನ ವಿದ್ಯಾಭ್ಯಾಸ ದ ಸಂಪೂರ್ಣ ಜವಬ್ದಾರಿಯನ್ನು ವಹಸುವುದಾಗಿ ಶಾಸಕ ರಾಜೇಶ್ ನಾಯ್ಜ್ ಭರವಸೆ ನೀಡಿದ್ದರು .ಅದರಂತೆ ಕೌಶಿಕ್ ನ ಪಿ.ಯು.ಸಿ.ವಿದ್ಯಾಭ್ಯಾಸ ಕ್ಕೆ ದಾಖಲಾತಿಯನ್ನು ಮಾಡಿಸಿ ಶಾಸಕರು ಮಾತನ್ನು ಉಳಿಸಿಕೊಂಡಿದ್ದಾರೆ. ಗಣೇಶ ಚತುರ್ಥಿಯಂದು ಕಾಲಿನಲ್ಲಿ ಕೊಟ್ಟಿಗೆ ಕಟ್ಟುವ ಮೂಲಕವು ಕೌಶಿಕ್ ಸುದ್ದಿಯಾಗಿದ್ದ.
