ಮುಂಬಯಿ: ಉಪನಗರದ ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ದೀಪಕ್ ನಿವಾಸ್ ಅಪಾರ್ಟ್‍ಮೆಂಟ್ ನಿವಾಸಿ ಡೋಲ್ಫಿ ಮಾರ್ಟಿಸ್ (60.) ತೀವ್ರ ಹೃದಯಾಘಾತದಿಂದ ಇಂದಿಲ್ಲಿ ಭಾನುವಾರ ಮುಂಜಾನೆ ದೀಪಕ್ ನಿವಾಸ್‍ನಲ್ಲಿ ನಿಧನರಾದರು.Dolphy Martis Chakala 1

ಉಡುಪಿ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಕಂಬ್ಳತೋಟ ಮೂಲತಃ ಡೋಲ್ಫಿ ಮಾರ್ಟಿಸ್ ಇವರ ಧರ್ಮಪತ್ನಿ (ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ದರ್ಬೆ ಮೂಲದ ಟ್ರೆಸ್ಸಿ ವೇಗಸ್ ಕಳೆದ ಜೂನ್‍ನಲ್ಲಷ್ಟೇ ಅಕಾಲಿಕವಾಗಿ ಮೃತರಾಗಿದ್ದರು. ಮಹಾನಗರದ ಹೆಸರಾಂತ ಟೂರ್ಸ್ ಎಂಡ್ ಟ್ರಾವೆಲ್ಸ್ ಸಂಸ್ಥೆಯಲ್ಲಿ ದೀರ್ಘಾವಧಿಯಿಂದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಮೃತರು ಇದೀಗ ಏಕೈಕ ಸುಪುತ್ರ ಟ್ರೆವರ್ ಮಾರ್ಟಿಸ್ ಸೇರಿದಂತೆ ಬಂಧು ಬಳಗ ಆಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ ಸೋಮವಾರ ಹೋಲಿ ಫ್ಯಾಮಿಲಿ ಇಗರ್ಜಿ, ಚಕಲಾ ಇಲ್ಲಿ ನೆರವೇರಿಸಲು ನಿರ್ಧಾರಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

By suddi9

Leave a Reply

Your email address will not be published. Required fields are marked *