ಬಂಟ್ವಾಳ: ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ರ್‍ಯಾಂಕ್ ಪಡೆದು ಶಾಲೆ ಮತ್ತು ತಾಲೂಕಿಗೆ ಕೀರ್ತಿ ತಂದಿರುವ ಕು.ಅವ್ರಿಲಾ ಲೀವಾ ಲೂವಿಸ್ ಡಿ’ಸೋಜರವರನ್ನು ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸನ್ಮಾನಿಸಿ ಅಭಿನಂದಿಸಿದರು.
ಶಾಸಕರ ನೇತೃತ್ವದ ನಿಯೋಗ ವಿದ್ಯಾರ್ಥಿನಿಯ ಮನೆಗೆ ತೆರಳಿ ಆಕೆಯನ್ನು ತಾಲೂಕಿನ ಪರವಾಗಿ ಗೌರವಿಸಿ,ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರೋನಾಲ್ಡ್ ಡಿ.ಸೋಜ,ಬಂಟ್ವಾಳ ಭೂ ಬ್ಯಾಂಕ್ ನಿರ್ದೇಶಕ,ವಕೀಲ ಅರುಣ್ ರೋಶನ್ ಡಿ’ಸೋಜ,ತಾಪಂ ಸದಸ್ಯ ಪ್ರಭಾಕರ ಪ್ರಭು, ಪ್ರಮುಖರಾದ ಗಣೇಶ್ ರೈ ಮಾಣಿ,ಜೆರಾಲ್ಡ್ ಡಿ’ಸೋಜ,ಜೀವನ್ ಲಾಯ್ಡ್ ಪಿಂಟೋ,ಸಂದೀಪ್ ಮಿನೇಜಸ್,ಕಿರಣ್, ವಿಶಾಲ್ ಡಿ’ಸೋಜ,ಮತ್ತು ವಿದ್ಯಾರ್ಥಿನಿಯ ಹೆತ್ತವರಾದ ಆವಿಲ್ ಲೂವಿಸ್,ಲವೀನಾ ಡಿ’ಸೋಜ ಉಪಸ್ಥಿತರಿದ್ದರು. 
