ಬಂಟ್ವಾಳ: ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಸಭಾಭವನದ ಉದ್ಘಾಟನಾ ಸಮಾರಂಭ ರವಿವಾರ ಸರಳ ರೀತಿಯಲ್ಲಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಉದ್ಯಮಿ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರು ನೂತನ ಸಭಾಭವನ ಉದ್ಘಾಟಿಸಿದರು.IMG-20200823-WA0029
ಅಧ್ಯಕ್ಷತೆ ವಹಿಸಿದ್ದ ಸಂಗಬೆಟ್ಟು ಕ್ಷೇತ್ರದ ಜಿ.ಪಂ.ತುಂಗಪ್ಪ ಬಂಗೇರ ಮಾತನಾಡಿ, ನಾವು ನಿಸ್ವಾರ್ಥ ಮನೋಭಾವನೆಯಿಂದ ದೇವರ ಕಾರ್ಯದಲ್ಲಿ ತೊಡಗಿದಾಗ ಪರಮಾತ್ಮನ ಶಕ್ತಿ ಪ್ರಾಪ್ತಿಯಾಗುತ್ತದೆ. ಶಾಲೆ, ದೇವಸ್ಥಾನಗಳನ್ನು ನಿರ್ಮಾಣ ಮಾಡುವ ವೇಳೆ ಹಣ ಮಾಡುವ ಆಲೋಚನೆ ಬಿಟ್ಟು ಸಮಾಜ ಸೇವೆಯ ಭಾವನೆ ಬೆಳೆಸಬೇಕಿದೆ. ಮುಂದೆ ಇಲ್ಲಿನ ಸಮುದಾಯ ಭವನಕ್ಕೆ ಸರಕಾರದಿಂದ ಅನುದಾನ ತೆಗೆಸಿಕೊಡುವುದಾಗಿ ಭರವಸೆ ನೀಡಿದರು.
ಧಾರ್ಮಿಕ ಮುಂದಾಳು ಮನ್ಮಥ್ ಜೆ.ಶೆಟ್ಟಿ ಅವರು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಮಾಜಿ ಸೈನಿಕ ಮೋನಪ್ಪ ಸಪಲ್ಯ ಕರೆಂಕಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಗೌಡ ಕರೆಂಕಿ, ಬಂಟ್ವಾಳ ಸಿ.ಎ.ಬ್ಯಾಂಕ್ ನಿರ್ದೇಶಕರಾದ ರಾಮಚಂದ್ರ ಗೌಡ ಮಣಿ, ಕರುಣೇಂದ್ರ ಪೂಜಾರಿ ಕೊಂಬರಬೈಲು, ಉದ್ಯಮಿ ಜಗದೀಶ್ ಪೂಜಾರಿ, ಬಂಟ್ವಾಳ ಪುರಸಭಾ ಸದಸ್ಯೆ ಮೀನಾಕ್ಷಿ ಜಗನ್ನಿವಾಸ್, ಶ್ರೀ ದುರ್ಗಾ ಟ್ರಸ್ಟ್ ಅಧ್ಯಕ್ಷ ಭಾಸ್ಕರ್ ಕುಲಾಲ್, ಮಹಿಳಾ ಸಮಿತಿ ಅಧ್ಯಕ್ಷೆ ಹರ್ಷಿತಾ ದಿನೇಶ್, ಹಿಂದೂ ಯುವ ಸೇನೆ ಮಾಜಿ ಅಧ್ಯಕ್ಷ ಪ್ರವೀಣ್ ದಡ್ಡಲಾಕಾಡು, ಶಂಕರ ಪೂಜಾರಿ ದರ್ಖಾಸು, ಪಂಜಿಕಲ್ಲು ಗ್ರಾ.ಪಂ.ಮಾಜಿ ಸದಸ್ಯ ಸುರೇಶ್  ಪೂಜಾರಿ ಜೋರಾ ಉಪಸ್ಥಿತರಿದ್ದರು.ಗ್ರಾ.ಪಂ.ಮಾಜಿ ಸದಸ್ಯ ಪೂವಪ್ಪ ಮೆಂಡನ್ ಸ್ವಾಗತಿಸಿದರು. ಧನರಾಜ್ ಕರೆಂಕಿ ವಂದಿಸಿದರು. ಆನಂದ್ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *