ಬಂಟ್ವಾಳ: ಕೊರೋನಾ ನಿಯಂತ್ರಿಸುವಲ್ಲಿ  ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ  ನೇತೃತ್ವದಲ್ಲಿ ಬಿ‌.ಸಿ.ರೋಡಿನ ಮಿನಿ ವಿಧಾನ ಸೌಧದ ಎದುರು ಆಗಸ್ಟ್ 26 ರಂದು  ಪ್ರತಿಭಟನೆ ಹಮ್ಮಿಕೊಳ್ಳಲು ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಿದೆ. ಸರಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಅನಗತ್ಯ ವಿಚಾರಗಳನ್ನು ತಂದು ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ.
ಕೊರೋನಾ ಸೋಂಕಿತರು ಹಾಗೂ ಕ್ವಾರಂಟೈನ್ ನಲ್ಲಿಡಲಾಗಿರುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಸಂಕಷ್ಟಕ್ಕೀಡುಮಾಡಿದೆ. ಇದಕ್ಕೆ ಸರಕಾರ ಜಿಲ್ಲಾಡಳಿತ ಮತ್ತು ಜಿಲ್ಲಾ  ಆರೋಗ್ಯ ಇಲಾಖೆ ನೇರ ಹೊಣೆಯಾಗಿದೆ ಎಂದು ಸಮಿತಿ ಆರೋಪಿಸಿದೆ.  ಕೊರೋನಾ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರ  ಲಾಕ್ ಡೌನ್ ಹೇರಿ ದುಡಿಯುವ ವರ್ಗವನ್ನು ಬೀದಿಗೆ ತಳ್ಳಲಾಗಿದೆ,ಅಸಂಘಟಿತ ಕ್ಷೇತ್ರದ ಕೆಲವೊಂದು ವಿಭಾಗದ  ಕಾರ್ಮಿಕರಿಗೆ ಪರಿಹಾರ ಘೋಷಿಸಿದ್ದರೂ ಬೀಡಿ ಕಾರ್ಮಿಕರು ಸೇರಿದಂತೆ ಬಹುತೇಕ ರಂಗದ ಕಾರ್ಮಿಕರಿಗೆ ಇನ್ನೂ ಪ್ಯಾಕೇಜ್ ನೀಡದೇ ಇರುವುದನ್ನು ಸಭೆಯಲ್ಲಿ ಖಂಡಿಸಲಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.  ಸರಕಾರ ಓನ್ ಲೈನ್ ಶಿಕ್ಷಣ ಜ್ಯಾರಿಗೊಳಿಸಲು ಸೂಚಿಸಿದ್ದರೂ ಇದು ಎಲ್ಲಾ ವಿದ್ಯಾರ್ಥಿಗಳಿಗೆ ಕೈಗೆಟುಕದಂತಿದೆ. ಗ್ರಾಮೀಣ ಭಾಗದ ಮಕ್ಕಳು ಓನ್ ಲೈನ್ ಶಿಕ್ಷಣ ಅವಕಾಶ ವಂಚಿತರಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ

ಹೊಡೆತ ಬೀಳಬಹುದು ಎಂದು ಆತಂಕ ವ್ಯಕ್ತಪಡಿಸಲಾಯಿತು. ಸಭಾಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ಬಿ.ಎಂ.ಪ್ರಭಾಕರ್ ದೈವಗುಡ್ಡೆ ವಹಿಸಿದ್ದರು. ಸಂಘಟನೆಯ ಪ್ರಮುಖರಾದ  ಪ್ರಕಾಶ್ ಶೆಟ್ಟಿ, ಲೋಕೇಶ್  ಅಲೆತ್ತೂರು, ರಾಜಾ ಚಂಡ್ತಿಮಾರ್, ರಾಮಣ್ಣ ವಿಟ್ಲ, ಹಾರುನ್ ರಶೀದ್, ಅಮಾನುಲ್ಲಾ, ತುಳಸೀದಾಸ್ ವಿಟ್ಲ, ಲೋಲಾಕ್ಷ, ಅಬ್ದುಲ್ ಕರೀಂ, ಜಗದೀಶ್ ಬಂಟ್ವಾಳ, ಪ್ರೇಮನಾಥ ಕೆ, ಶ್ರೀನಿವಾಸ ಭಂಡಾರಿ, ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.  ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ,  ಕಾರ್ಯದರ್ಶಿ ಬಿ.ಶೇಖರ್ ವಂದಿಸಿದರು.

By Suddi9

Leave a Reply

Your email address will not be published. Required fields are marked *