ಬಂಟ್ವಾಳ: ಇನ್ಫ್ಯಾಂಟ್ ಜೀಸಸ್ ಚರ್ಚ್ ಮೊಡಂಕಾಪು ಇಲ್ಲಿ ಚರ್ಚ್ ಸುತ್ತಮುತ್ತಲಿನ ನಾಗರಿಕರಿಗೆ 150 ಸಸಿಗಳನ್ನು ವಿತರಿಸಲಾಯಿತು ಮತ್ತು 15 ಬಗೆಯ ಹಣ್ಣು ಹಂಪಲಿನ ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ವಲೇರಿಯನ್ ಡಿಸೋಜಾ, ಫಾದರ್ ತ್ರಿಶಾನ್ ಡಿಸೋಜಾ, ಫಾದರ್ ಮೆಲ್ವಿನ್ ಲೋಬೊ, ಮಾತೃ ಸಂಘದ ಸದಸ್ಯ ರೋ ಸಂದೀಪ್ ಮೆನೆಜಸ್,ರೋ .ಪಿ . ಎಚ್.ಎಫ್ ಪದ್ಮನಾಭ ರೈ, ಕಾರ್ಯದರ್ಶಿ ಕಿಶೋರ್, ರೋಟೋರಿಯನ್ಸ್ ಉಮೇಶ್ ನೆಲ್ಲಿ ಗುಡ್ಡೆ, ಉಮೇಶ್ ಮೂಲ್ಯ, ರಮೇಶ್ ಶೆಟ್ಟಿ, ಸುದೀರ್ ಶೆಟ್ಟಿ, ಸತೀಶ್, ನಾಗೇಶ್, ಸೇಸಪ್ಪ ಮೂಲ್ಯ, ಸುರೇಶ್ ಸಾಲಿಯಾನ್, ಸುಧಾಕರ್ ಸಾಲಿಯಾನ್, ಚಿತ್ತರಂಜನ್ ಶೆಟ್ಟಿ, ಆಲ್ಬರ್ಟ್ ಮೆನೆಜಸ್, ಸುಕುಮಾರ್ ಬಂಟ್ವಾಳ್ ಮುಂತಾದವರು ಪಾಲ್ಗೊಂಡಿದ್ದರು.
