ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇದರ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಪಂಚಾಯತಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣವನ್ನು ಅಳದಂಗಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾದ ಮಾನ್ಯ ಶೇಖರ್ ಕುಕ್ಕೇಡಿ ನೆರವೇರಿಸಿದರು.
ಗಂಧಗಿ ಮುಕ್ತ ಭಾರತ್ ಅಭಿಯಾನದ ಅಂಗವಾಗಿ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಪ್ರತಿಜ್ಞೆಯನ್ನು ಗ್ರಾಮ ಪಂಚಾಯತ್ ಬಿಲ್ ವಸೂಲಿಗ ಆನಂದ್ ಬೋಧಿಸಿದರು. ಗ್ರಾ. ಪಂ ನ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ನವೀನ್ ,ಮಾಜಿ ಗ್ರಾ.ಪಂ. ಸದಸ್ಯ ಉದಯ್ ಕುಮಾರ್,ಸಂಜೀವಿನಿ ಮಹಿಳಾ ಒಕ್ಕೂಟದ ಮೇಲ್ವಿಚಾರಕರಾದ ಚಂದ್ರಿಕಾ ,ಶ್ರುತಿ, ಗ್ರಾ.ಪಂ. ಸಿಬ್ಬಂದಿಗಳು ಹಾಗೂ ಗುತ್ತಿಗೆದಾರ ಪ್ರವೀಣ್ ಉಪಸ್ಥಿತರಿದ್ದರು.
