ಬಂಟ್ವಾಳ : ರಾಯಿ ಗ್ರಾಮದ ಗೋಪಿನಾಥ ರೈ ಅವರ ೫ ಎಕ್ರೆ ಹಡೀಲು ಗದ್ದೆಯಲ್ಲಿ ಭತ್ತದ ಕೃಷಿ ಪೋಷಕಾಂಶ, ರಸ ಗೊಬ್ಬರ ನಿರ್ವಹಣೆ ಬುಧವಾರ ನಡೆಯಿತು. ಹಡೀಲು ಗದ್ದೆ ನಿರ್ವಾಹಕ ಸುಧೀರ್ ಕುಮಾರ್ ಶೆಟ್ಟಿ ರಾಯಿ ಮಾತನಾಡಿ ಭತ್ತದ ಕೃಷಿ ಲಾಭದಾಯಕ ಎಂದು ತೋರಿಸುವ ಉದ್ದೇಶದಿಂದ ಈ ಹಡೀಲು ಗದ್ದೆಯಲ್ಲಿ ಕೃಷಿ ಮಾಡಲಾಗಿದೆ. ಜು. 17 ರಂದು ಯಂತ್ರದ ಮೂಲಕ ಉಳುಮೆ ಮಾಡಿ ಬಿತ್ತನೆ ಮಾಡಲಾಗಿದೆ. 27 ದಿನಗಳ ಬಳಿಕ ಗದ್ದೆಗೆ ಗೊಬ್ಬರ ನಿರ್ವಹಣೆ ಮಾಡಲಾಗುತ್ತಿದೆ.  ಇದಕ್ಕೆ ಕೇವಲ ದ್ರವ ರೂಪದ ಪೋಷಕಾಂಶವನ್ನಷ್ಟೇ  ಬಳಸಿದ್ದು ಕೃಷಿಯು ರೋಗ ರಹಿತವಾಗಿ ಪುಷ್ಠಿದಾಯಕವಾಗಿ ಬೆಳೆದಿದೆ. ಭವಿಷ್ಯದಲ್ಲಿ ಯುವಕರಿಗೆ ಹಡೀಲು ಗದ್ದೆಯನ್ನು ಕೃಷಿ ಮಾಡುವ  ಪ್ರೇರಣೆಯಾಗಬೇಕೆಂಬ ದಿಸೆಯಲ್ಲಿ ಮಾದರಿ ರೂಪದಲ್ಲಿ ಕೃಷಿ ಮಾಡಿರುವುದಾಗಿ ತಿಳಿಸಿದರು. Rayi Photo
ಭತ್ತದ ಕೃಷಿಯನ್ನು ಶೇ. ೪೦ರಷ್ಟು ಲಾಭದಾಯಕವಾಗಿ ಮಾಡಬಹುದು. ಯುವ ಜನತೆ ಔದ್ಯೋಗಿಕ ಕೃಷಿಯ ಲಾಭವನ್ನು ಪಡೆದುಕೊಳ್ಳಬೇಕು ಎಂದರು. ಪ್ರಗತಿಪರ ಕೃಷಿಕ ಕಿಶೋರ್ ಭಂಡಾರಿ, ತೆಂಗು ಸೌಹಾರ್ಧ ಸಹಕಾರಿ  ನಿಯಮಿತದ ಅಧ್ಯಕ್ಷ ರಾಜಾ ಬಂಟ್ವಾಳ್, ಕಾ.ನಿ.ಅಧಿಕಾರಿ ಹರ್ಷಿತ್,  ಪ್ರಮುಖರಾದ ಪ್ರಕಾಶ್ ಬಿ. ಶೆಟ್ಟಿ ಶ್ರೀಶೈಲ, ಸತೀಶ್ ಪೂಜಾರಿ ಕಾರಂಬಡೆ, ರವಿರಾಜ್ ಜೈನ್ ಮತ್ತು ಸ್ಥಳೀಯ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *