ಬಂಟ್ವಾಳ: ಎಸೆಸೆಲ್ಸಿ ಪರೀಕ್ಷೆಯಲ್ಲಿ ೬೨೩ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದು ಬಂಟ್ವಾಳ ತಾಲೂಕು ಮತ್ತು ಶಾಲೆಗೂ ಕೀರ್ತಿ ತಂದಿರುವ ಬಿ.ಮೂಡಗ್ರಾಮದ ಮೊಡಂಕಾಪು ಇನೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅವ್ರಿಲ್ ಲೀವಾ ಲೂವಿಸ್ ಇವರನ್ನು ಬುಧವಾರ ಅಭಿನಂದಿಸಲಾಯಿತು.
ಮಾಜಿ ಸಚಿವ ರಮಾನಾಥ ರೈ ಅವರನ್ನೊಳಗೊಂಡ ನಿಯೋಗ ಮೊಡಂಕಾಪುಗಾಂದೋಡಿಯಲ್ಲಿರುವ ಆಕೆಯ ಮನೆಗೆ ತೆರಳಿ ವಿದ್ಯಾರ್ಥಿನಿ ಅವ್ರಿಲ್ ಲೀವಾ ಲೂವಿಸ್ ಳನ್ನು ಸನ್ಮಾನಿಸಿ ಶುಭ ಹಾರೈಸಿತು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿಕುಂದರ್ , ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರಾ , ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ,ಮಾಜಿ ಸಚಿವ ರೈ ಅವರ ಆಪ್ತ ಕಾರ್ಯದರ್ಶಿ ಡೆಂಜಿಲ್ ಹರ್ಮನ್ ನೊರೊನ್ಹಾ ಹಾಗೂ ಆಕೆಯ ಹೆತ್ತವರಾದ ಅವಿಲ್ ಲೂವಿಸ್ ಹಾಗೂ ಲವೀನಾ ಡಿಸೋಜ ದಂಪತಿ ಉಪಸ್ಥಿತರಿದ್ದರು.
