ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟು ಸ್ನೇಹಾಂಜಲಿ ಸೇವಾಸಂಘದ  ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅಜ್ಜಿಬೆಟ್ಟು  ಬಸವ ಮಂಟಪದಲ್ಲಿ ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರಳವಾಗಿ ನಡೆಸಲಾಯಿತು.IMG-20200811-WA0168

ಸಂಘದ ಕಾರ್ಯಕತರೆಲ್ಲರು  ಸೇರಿಕೊಂಡು ಶ್ರೀಕೃಷ್ಣನನ್ನು  ಸ್ತುತಿಸಿ, ದೀಪ ಬೆಳಗಿಸಿ, ಭಜನೆಯ ಮೂಲಕ ದೇವರನ್ನು ಆರಾಧಿಸಲಾಯಿತು,  ಇದೇ ವೇಳೆ  ಈ ವರ್ಷದ ಪಿ.ಯು.ಸಿ ಪರೀಕ್ಷೆಯಲ್ಲಿ 588 ಅಂಕ ಪಡೆದು ರಾಜ್ಯದಲ್ಲಿ 9ನೇ ಸ್ಥಾನ ಪಡೆದು ಸಾದನೆಗೈದ ಬಿ. ಸಿ. ರೋಡಿನ ಮಠ ನಿವಾಸಿ ಮನೋಹರ ಹಾಗೂ ಸಬಿತ ದಂಪತಿಯ ಪುತ್ರಿ ಬಂಟ್ವಾಳ ಎಸ್ ವಿ ಎಸ್ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಕು.ಶಿವಾಣಿಯನ್ನು   ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯರಾದ ನಿಲೋಜಿ ರಾವ್ ಸಂಚಯಗಿರಿ , ಕಮಲಾಕ್ಷ ಅಜ್ಜಿಬೆಟ್ಟು,ಉದ್ಯಮಿಇಂದಿರೇಶ್, ಸಂಫದ ಗೌರವಧ್ಯಕ್ಷ ಪ್ರಮೋದ್  ಕುಮಾರ್ ಅಜ್ಜಿಬೆಟ್ಟು, ಮಾಜಿ ಅಧ್ಯಕ್ಷ ನಾಗೇಶ್ ಮಿತ್ತಬೈಲ್, ಮಾಜಿ ಕಾರ್ಯದರ್ಶಿ ಲಕ್ಮಣ್ ಅಗ್ರಬೈಲ್, ಸ್ಥಾಪಕಅಧ್ಯಕ್ಷ ಶೀಧರ್ ಅಮಿನ್ , ಅಧ್ಯಕ್ಷ ಉದಯ ಅಮಿನ್ ರವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *