ಬಂಟ್ವಾಳ: ಮಾ,ಇ ಯುವಕ ಮಂಡಲದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ  ಮೊಸರುಕುಡಿಕೆ ಉತ್ಸವವನ್ನು ಮಾಣಿಗಾಂಧಿ ಮೈದಾನದಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಣಮ್ಯ ಶೆಟ್ಟಿ(೬೧೩),ಪ್ರತೀಕ್ಷ ಕುಲಾಲ್ (೬೧೧) ಅವರನ್ನು ಅಭಿನಂದಿಸಲಾಯಿತು.IMG_20200812_154309
ಇದೇವೇಳೆ ಸುಮಾರು  ಪರಿಸರದ 25 ಕುಟುಂಬಗಳಿಗೆ ಅಕ್ಕಿ,ತೆಂಗಿನಕಾಯಿಯನ್ನು ವಿತರಿಸಲಾಯಿತು.ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು ಕಾರ್ಯಕ್ರಮ ಉದ್ಘಾಟಿಸಿದರು.ಮಾಜಿ ಸಚಿವ ಬಿ.ರಮಾನಾಥ ರೈ,ತಾಪಂ.ಸದಸ್ಯೆ ಮಂಜುಳಾ ಕುಶಲ ಪೆರಾಜೆ,ಬಂಟ್ವಾಳ ತಾ.ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣಕೊಡಾಜೆ ಯವರು ಅತಿಥಿಗಳಾಗಿ ಭಾಗವಹಿಸಿದ್ದರು.
ಮಾಣಿ ಯುವಕಮಂಡಲದ ಅಧ್ಯಕ್ಷ ಸುದೀಪ್ ಕುಮಾರ್ ರೈ ,ಪದಾಧಿಕಾರಿಗಳಾದ ಜಗದೀಶ್ ಜೈನ್,ನಾಗರಾಜ ಪೂಜಾರಿ,ದಯಾನಂದ,ಹಮೀದ್ ಪಲ್ಕೆ,ಮೋಹನದಾಸ್ ,ಗುರುಪ್ರಸಾದ್ ಬಲ್ಯ,ವಿಕೇಶ್ ಶೆಟ್ಟಿ ಕೊಡಾಜೆ,ಗಿರೀಶ್ ಮಾದಲಾದವರಿದ್ದರು.ಈ ಸಂದರ್ಭ ಬರಿಮಾರು ಕಲ್ಲೆಟ್ಟಿ ಕಾಲ್ತಾಯ ಮಹಾಕಾಳಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ,ಪುರುಷರ ಕಬಡ್ಡಿ,ಮಡಕೆ ಒಡಯುವುದು,ಅಡಕೆ ಮರ ಹತ್ತಿ ಮೊಸರು ತೆಗೆಯುವ ಸ್ಪರ್ಧೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು.

By suddi9

Leave a Reply

Your email address will not be published. Required fields are marked *