ಬಂಟ್ವಾಳ:ಮಂಗಳೂರಿನ ಡೈಜಿವಲ್ಡ ಚಾನಲ್ ನಲ್ಲಿ ಹಿಂದೂ ಸಮಾಜದ ದಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಕಾರ್ಯಕ್ರಮ ಪ್ರಸಾರ ಮಾಡಿರುವ ಕಾರ್ಯಕ್ರಮ ನಿರೂಪಕರು ಹಾಗೂ ಕಲಾವಿದರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಬಂಟ್ವಾಳ ನಗರ ಠಾಣೆಯ ಉಪನೀರಿಕ್ಷರ ಮೂಲಕ ಹಿ.ಜಾ.ವೇ.ಯ ಬಂಟ್ವಾಳ ಘಟಕದ ಪ್ರಮಖರು ಮನವಿ ಸಲ್ಲಿಸಿದರು.
ಹಿಂದು ಸಮಾಜದ ಸ್ವಾಮೀಜಿಗಳ,ಜ್ಯೋತಿಷಿಗಳ ಕುರಿತಂತೆ ಅವಹೇಳನ ಮಾಡುತ್ತಾ,ಹಿಂದೂ ದೈವ, ದೇವರ ಮತ್ತು ಆಚರಣೆಗಳ ಬಗ್ಗೆ ಅಪಮಾನ ಮಾಡುವ ಕೃತ್ಯ ಖಂಡಿಸಿರುವ ಹಿ.ಜಾ.ವೇ.ಬಂಟ್ವಾಳ ಘಟಕ ಹಿಂದೂಗಳ ದಾರ್ಮಿಕ ಭಾವನೆಗೆ ದಕ್ಕೆ ಉಂಟುಮಾಡಿರುವ ಚಾನಲ್ ನಕಾರ್ಯಕ್ರಮ ನಿರೂಪಕರು ಹಾಗೂ ಕಲಾವಿದರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದೆ.
