ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುವ ಶ್ರೀ ಕೃಷ್ಣಜನ್ಮಾಷ್ಟಮಿಯು ಒಂದು ವಿಶಿಷ್ಟ ಹಬ್ಬ. ಈ ಹಬ್ಬದ ಆಚರಣೆ ಶ್ರೀಕೃಷ್ಣನನ್ನು ಸಂತೋಷಗೊಳಿಸಲು ಮತ್ತು ಆಶೀರ್ವಾದ ಪಡೆಯಲು ಬಹಳ ಮುಖ್ಯ ಎಂದು ಹೇಳಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿ ಹಬ್ಬದ ಪರ್ವದಲ್ಲಿ ಫೋಟೋ ಶೂಟ್ ಗಳದ್ದೇ ಟ್ರೆಂಡ್. ಹೆಚ್ಚಾಗಿ ಎಲ್ಲರ ಮನೆಯಲ್ಲೂ ತಮ್ಮ ಮಕ್ಕಳಿಗೆ ಕೃಷ್ಣ ರಾಧೆಯ ವೇಷ ಹಾಕಿ ಫೋಟೋ ತೆಗಿಸಿಕೊಂಡು ಹಬ್ಬವನ್ನು ಆಚರಿಸುತ್ತಾರೆ.ಈ ಸಲ ತುಳುನಾಡ ಸಿನಿ ಕುವರಿಯರು ರಾಧಾ ಕೃಷ್ಣರ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಈ ಕೋಸ್ಟಲ್ ವುಡ್ ಸಿನಿ ಕುವರಿಯರು ಯಾರು ಗೊತ್ತಾ ?
ಚೋರ ತನದಲಿ ಬೆಣ್ಣೆ ಸವಿದ ಕೃಷ್ಣನ ವೇಷದಲ್ಲಿ ಅಪ್ಪೆ ಟೀಚರ್, 2ಎಕ್ರೆ, ಆಟಿಡೊಂಜಿದಿನ ಚಿತ್ರದ ನಟಿ ನಿರೀಕ್ಷ ಶೆಟ್ಟಿ ಹಾಗೂ ರಾಧೆಯಾಗಿ ಉಮಿಲ್, ಇಂಗ್ಲಿಷ್ ಚಲನಚಿತ್ರದ ನಾಯಕಿ ನವ್ಯಾ ಪೂಜಾರಿ ಮತ್ತು ನಟಿ ಅಂಕಿತಾ ಪಟ್ಲ ಮೀರಾ ವೇಷದಲ್ಲಿ ಮಿಂಚಿದ್ದಾರೆ.
ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ0ತೆ ರಾಗಸ್ಪರ್ಶ0 ತಂಡದ ಯುವ ನಿರ್ದೇಶಕ ರಾಜ್ ಗುರು ಬಿ. ಮೇಘ ಶ್ಯಾಮ ಎನ್ನುವ ಹೊಸ ಶೈಲಿಯ ಗೀತೆಯನ್ನು ರಚಿಸಿದ್ದಾರೆ. ಹಾಗೂ ಅದ್ಭುತವಾಗಿ ಸಂಗೀತ ನೀಡಿದ sangeeth kc ಸ್ವತಃ ಅವರು ಹಾಗೂ ಸುಶ್ಮಿತಾ ಪಾಟಾಳಿ ಹೊಸ ಶೈಲಿಯ ಹಾಡನ್ನು ಇಂಪಾಗಿ ಹಾಡುವ ಮೂಲಕ ಕೇಳುಗರ ಮನಸ್ಸನ್ನು ಗೆದ್ದಿದ್ದಾರೆ.
ರಕ್ಷಿತ್ ಚಿನ್ನು ವಿಶೇಷವಾಗಿ ತನ್ನ ಕ್ಯಾಮೆರಾದ ಮೂಲಕ ರಾಧಾಕೃಷ್ಣರ ಫೋಟೋ ಸೆರೆ ಹಿಡಿದಿದ್ದು
ಪಬ್ಲಿಸಿಟಿ ಡಿಸೈನ್ :ಗುರುಪ್ರಸಾದ್ ಆಚಾರ್ಯ
ಶೀರ್ಷಿಕೆ : ಶಿವ ಆರ್ಟ್ಸ್
ಆನ್ಲೈನ್ ಪ್ರಮೋಷನ್ :ಸುಜಿತ್ ಪಾಟಾಳಿ
ನೀಡುವ ಮೂಲಕ ಈ ಸಲದ ಕೃಷ್ಣಜನ್ಮಾಷ್ಟಮಿಯನ್ನು ಕೃಷ್ಣಮಯವನ್ನಾಗಿ ಮಾಡಿರುವುದ0ತೂ ಸತ್ಯ.
*ದೀಪಕ್ ಕಾಮತ್ ಎಳ್ಳಾರೆ



