ಬಂಟ್ವಾಳ: ಪ್ರಸಕ್ತ ಸಾಲಿನ ಎಸ್. ಎಸ್ .ಎಲ್. ಸಿ.ಪರೀಕ್ಷೆಯಲ್ಲಿ ಕಾಲಿನ ಬೆರಳಿನ ಮೂಲಕವೇ ಉತ್ತರ ಬರೆದು 424 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಕೌಶಿಕ್ ಆಚಾರ್ಯ ಕಂಚುಗಾರಪೇಟೆ ಇವರನ್ನು ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕುಘಟಕದ ವತಿಯಿಂದ ತಾಲೂಕು ಮತ್ತು ಜಿಲ್ಲಾ ಘಟಕದ ಪ್ರಮುಖರ ಉಪಸ್ಥಿತಿಯಲ್ಲಿ ಅತನ ಮನೆಯಲ್ಲೆ ಸನ್ಮಾನಿಸಲಾಯಿತು.
ಶಾಸಕರಿಂದ ನೆರವು :
ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಿಂದ ಶಭಾಹಸ್ ಗಿರಿ ಪಡೆದಿರುವ ಕೌಶಿಕ್ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಕೂಡ ಅಭಿನಂದನೆ ಸಲ್ಲಿಸಿ,ಮುಂದಿನ ಶಿಕ್ಷಣಕ್ಕೆ ನೆರವು ನೀಡುವ ಭರವಸೆಯನ್ನಿತ್ತಿದ್ದಾರೆ.
