ಬಂಟ್ವಾಳ: ಶನಿವಾರ ಅಪಾಯಮಟ್ಟವನ್ನು ಮೀರಿ ಸುಮಾರು 9.3 ರ ಎತ್ತರದಲ್ಲಿ ಹರಿದು ಆತಂಕ ಮೂಡಿಸಿದ್ದ ನೇತ್ರಾವತಿ ನದಿಯ ಹರಿವು ಸೋಮವಾರ ಸಂಜೆಯ ವೇಳೆಗೆ ಸಂಪೂರ್ಣ ಇಳಿಮುಖವಾಗಿದ್ದು, ನೀರು ನದಿಪಾತ್ರದ ಒಳಗೆ 5.8 ಮೀ.ಎತ್ತರದಲ್ಲಿ ಹರಿಯುತ್ತಿದೆ. ಕಳೆದೆರಡು ದಿನಗಳಿಂದ ಎಡೆಬಿಡದೆ ತರಿಯುವ ಮಳೆ ಹಾಗೂ ನೀರಿನ ಹರಿವು ಹೊಂದಿಕೊಂಡು ನೇತ್ರಾವತಿ ನದಿಯ ಹರಿವು ಬಂಟ್ವಾಳದಲ್ಲಿ ಏರಿಳಿತವಾಗುತ್ತದೆ. 
ಮನೆಗೆ ಹಾನಿ :
ಬಿ.ಸಿ.ರೋಡ್, ಬಂಟ್ವಾಳ ಸಹಿತ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು,ಸುಮಾರು 0.4 ಹೇಕ್ಟರ್ ನಷ್ಟ ತೋಟಗಳು ಹಾನಿಯಾಗಿದ್ದು,ಹಲವು ಮನೆಗಳಿಗೂ ಹಾನಿಯಾಗಿದೆ. ತಾಲೂಕಿನಲ್ಲಿ ತಲಾ 3 ಪಕ್ಕಾ ಮತ್ತು ಕಚ್ಚಾ ಮನೆಗಳು ಭಾಗಶ: ಹಾನಿಯಾಗಿದ್ದರೆ,ತಲಾ 2 ಪಕ್ಕಾ ಮತ್ತು ಕಚ್ಚಾ ಮನೆಗಳು ತೀವ್ರ ಹಾನಿಯಾಗಿದೆ ಹಾಗೆಯೇ ಒಂದು ಪಕ್ಕಾ ಮನೆ ಸಂಪೂರ್ಣ ಹಾನಿಯಾಗಿದೆ ಎಂದು ತಾಲೂಕು ಕಚೇರಿಯ ಪ್ರಕಟಣೆ ತಿಳಿಸಿದೆ.ಸರಪಾಡಿ ಪೆರ್ಲಬೀಯಾಪಾದೆ ಎಂಬಲ್ಲಿ ಗಿರೀಶ್ ಅವರಿಗೆ ಸೇರಿದ ಕೋಳಿಫಾರಂ ಗಾಳಿಗೆ ಛಾವಣಿ ಸಮೇತ ಧರಾಶಾಹಿಯಾಗಿದ್ದು,ಅಪಾರನಷ್ಟವುಂಟಾ
