ಬಂಟ್ವಾಳ : ತಾಲೂಕಿನ ಕಳ್ಳಿಗೆ ಗ್ರಾ.ಪಂ.ವ್ಯಾಪ್ತಿಯ ತೊಡಂಬಿಲ ಎಂಬಲ್ಲಿ ಮನೆಯ ಕೆಳಭಾಗದಲ್ಲಿ ಭೂಕುಸಿತ ಉಂಟಾಗಿ ಮನೆ ಸಂಪೂರ್ಣ ಕುಸಿಯುವ ಭೀತಿ ಎದುರಿಸುತ್ತಿದೆ. ತೊಡಂಬಿಲದ ಅನಿಲ್ ಮೊಂತೆರೋ ಅವರ ಮನೆ ಭೂಕುಸಿತದಿಂದಾಗಿ ಸಂಪೂರ್ಣ ಕುಸಿಯುವ ಹಂತದಲ್ಲಿದೆ.ಮನೆಯ ಒಂದು ಪಾಶ್ವ೯ದಲ್ಲಿ ಈಗಾಗಲೇ ಕುಸಿತ ಉಂಟಾಗಿ ಮನೆ ವಾಲಿದೆ.ಮನೆ ಸಾಮಾಗ್ರಿಗಳನ್ನು ಹಾಗೂ ಅವರ ಮನೆಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಾಂತರಿಸಲಾಗಿದೆ.
ಸುದ್ದಿ ತಿಳಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ತಹಶೀಲ್ದಾರ್ ರಶ್ಮೀ ಎಸ್ .ಆರ್.ಕಂದಾಯ ನಿರೀಕ್ಷಕ ರಾಮಕಾಟಿಪಳ್ಳ ಅವರು ಪರಿಶೀಲನೆ ನಡೆಸಿ,ಅನಿಲ್ ಅವರಿಂದ ಮಾಹಿತಿ ಪಡೆದುಕೊಂಡರು.ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ರಮಾನಾಥ ರಾಯಿ,ಗಣೇಶ್ ರೈ ಮಾಣಿ ಮತ್ತು ಸ್ಥಳೀಯ ಪ್ರಮುಖರು ಹಾಜರಿದ್ದರು.ಹಾಗೆಯೇ ಮಾಜಿ ಸಚಿವ ರಮಾನಾಥ ರೈ, ಜಿಪಂ ಸದಸ್ಯಚಂದ್ರಪ್ರಕಾಶ್ ಶೆಟ್ಟಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುವ ಭರವಸೆ ಇತ್ತರು. ಈ ಪ್ರದೇಶ ಯಾರು ಬಾರದಂತೆ ತಹಶೀಲ್ದಾರ್ ರಶ್ಮೀ ಅವರು ಸ್ಥಳೀಯರಿಗೆ ಸೂಚಿಸಿದ್ದಾರೆ.
