ಬಂಟ್ವಾಳ:ಬಿ.ಮೂಡಗ್ರಾಮದ ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನ 40 ನೇ ವಾರ್ಷಿಕ ಮಹಾಸಭೆಯು ಅಲೆತ್ತೂರು ಮಂಗಳ ಭವನದಲ್ಲಿ ರವಿವಾರ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.2020-21 ನೇ ಸಾಲಿಗೆನೂತನ ಅಧ್ಯಕ್ಷರಾಗಿ ಭಾಸ್ಕರ ಕುಲಾಲ್ ಪುನರಾಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ನಿತಿನ್ ಪೂಜಾರಿ ನಂದರಬೆಟ್ಟು, ಕಾರ್ಯದರ್ಶಿಯಾಗಿ ಗಿರಿಧರ ಚೆಂಡಾಡಿ, ಜೊತೆ ಕಾರ್ಯದರ್ಶಿಯಾಗಿ ಉಮೇಶ್ ಬಂಗೇರ ಕೊಡಂಗೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ್ ನಂದರಬೆಟ್ಟು, ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ ರೈ, ಹಾಗೂ ಜೊತೆ ಕ್ರೀಡಾ ಕಾರ್ಯದರ್ಶಿ ಶಿವರಾಜ್ ಆಯ್ಕೆಯಾಗಿದ್ದಾರೆ.ಉಳಿದಂತೆ ಕಾರ್ಯಕಾರಿ ಸಮಿತಿಗೆವಿಶ್ವನಾಥ ರೈ, ವಾಸುದೇವ್,ಚಂದ್ರಪ್ರಕಾಶ್, ರಾಜೇಶ್ ಕುಮಾರ್,ವಿಜಯ್ ಕುಮಾರ್, ಭಾಸ್ಕರ ಪುಜಾರಿ, ವಿಶ್ವನಾಥ ಪೈ ಅವರು ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಈಸಂದರ್ಭ ರಂಜಿತ್ ಪುಜಾರಿ ನಂದರಬೆಟ್ಟು ಹಾಗೂ ನಾರಾಯಣ ಪೂಜಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
