ಬಂಟ್ವಾಳ:ಬಡವರ ಸೇವೆಯೊಂದಿಗೆ ಸದಾ ಸುದ್ದಿಯಲ್ಲಿರುವವರು ಪ್ರಶಾಂತ್ ಭಂಡಾರ್ಕರ್ ಬಂಟ್ವಾಳ್ ,ಈ ಮೊದಲು ಮೋದಿಜಿಯವರು ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೆ ಗಡ್ಡ ಹಾಗು ಕೂದಲಿಗೆ ಕತ್ತರಿ ಹಾಕದೆ ಸುದ್ದಿಯಾದವರು ,

000ತದ ನಂತರ ಅಯೋಧ್ಯ ಶ್ರೀ ರಾಮ ಚಂದ್ರನ ಮಂದಿರ ನಿರ್ಮಾಣದ ಅಡಿಗಲ್ಲು ಹಾಕುವ ದಿನದಂದೇ ತನ್ನ ಗಡ್ಡ ಕೂದಲಿಗೆ ಮುಕ್ತಿ ನೀಡಲು ಪಣ ತೊಟ್ಟವರು , ಇದೀಗ ಆಗಸ್ಟ್ 5 ರಂದು ಅಯೋಧ್ಯೆ ಯಲ್ಲಿ ಶ್ರೀ ರಾಮ ಮಂದಿರದ ಶಿಲಾನ್ಯಾಸ ಸಮಯದಲ್ಲಿ ತನ್ನ ಗಡ್ಡ ಕೂದಲಿಗೆ ಮುಕ್ತಿ ನೀಡಲಿದ್ದಾರೆ. ವರ್ಷದ ಹಿಂದೆ ನಿರ್ಮಿಸಿದ ತನ್ನ ಮನೆಯ ಹೆಸರನ್ನು ” ಜೈ ಶ್ರೀ ರಾಮ್ ” ಎಂದು ಇಟ್ಟು ಭಕ್ತಿ ಮೆರೆದವರು , ಅಪ್ಪಟ ಮೋದಿ ಅಭಿಮಾನಿ , ಪ್ರಧಾನಿ ಯಾರೇ ಆದರೂ , ಯಾವ ಪಕ್ಷದವರೇ ಆದರೂ ಭಾರತದ ಪ್ರಜೆಯಾದ ನಾವು ಗೌರವವನ್ನು ನೀಡುವೆಕೆನ್ನುವುದು ಇವರ ವಾದ , ಬಂಟ್ವಾಳದಲ್ಲಿ ಬಾಲಾಜಿ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ಇವರು ತನ್ನ ವೃತ್ತಿ ಭಾಂದವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ , ಪ್ರತಿದಿನ ತನ್ನ ವೃತ್ತಿ ಭಾಂದವರಿಗೆ ದಿನದ ಸಂಬಳ ನೀಡಿ , ಉಳಿದರೆ ತನಗೆಂದು ಪಡೆಯುತ್ತಾರೆ , ಬಂಟ್ವಾಳ ಗ್ಯಾರೇಜು ಮಾಲಕರ ಸಂಘದ ಗೌರವ ಸಲಹೆಗಾರರಾದ ಇವರು ಎಲ್ಲಾ ಗ್ಯಾರೇಜು ಮಾಲಕರಿಗೆ ಅಚ್ಚು ಮೆಚ್ಚು , ಇಂತಹ ವ್ಯಕ್ತಿತ್ವ ಕಾಣ ಸಿಗುವುದು ಬಹಳ ಅಪರೂಪ*

By suddi9

Leave a Reply

Your email address will not be published. Required fields are marked *