ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಾಗೂ ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಬಾಲಗಣಪತಿ ದೇವಸ್ಥಾನದಲ್ಲಿ ಸರಕಾರದ ಸುತ್ತೋಲೆಯಂತೆ ಶ್ರೀ ರಾಮ ಜನ್ಮಭೂಮಿ ಯಲ್ಲಿ ಭವ್ಯ ದೇಗುಲ ಶೀಘ್ರದಲ್ಲಿ ಪುನರ್ ನಿರ್ಮಾಣವಾಗುವಂತೆ ಮತ್ತು ಜಗತ್ತಿಗೆ ಬಂದಿರುವ ಕಂಟಕ ದೂರವಾಗಲಿ ಎಂದು ಸಜೀಪ ಮಾಗಣೆಯ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


