ಬಂಟ್ವಾಳ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ  ಶ್ರೀರಾಮಚಂದ್ರನ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸುವ ಶಿಲಾನ್ಯಾಸದ  ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲಿ ಮತ್ತು ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಪೊಳಲಿ ಶ್ರೀ ರಾಜರಾಜೇಶ್ವರಿ  ಹಾಗೂ ಬಿ.ಸಿ.ರೋಡಿನ ಶ್ರೀರಕ್ತೇಶ್ವರೀ ದೇವಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ಬಂಟ್ವಾಳ ವತಿಯಿಂದ ವಿಶೇಷ ಪೂಜೆ ನಡೆಯಿತು.

18-14-33-IMG-20200805-WA0059-768x432ಪೊಳಲಿಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿಯವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ,ತಾ.ಪಂ ಸದಸ್ಯ ಯಶವಂತ ಪೊಳಲಿ,ಯುವ ಮೋರ್ಚಾದ ಸುದರ್ಶನ್ ಬಜ,ಪ್ರದೀಪ್ ಅಜ್ಜಿಬೆಟ್ಟು,ಅಶ್ವಥ್,ಕಾರ್ತಿಕ್ ಬಳ್ಳಾಲ್, ಕಿಶೋರ್ ಪಲ್ಲಿಪ್ಪಾಡಿ.ಲೋಕೇಶ್ ಭರಣಿ,ನಂದರಾಮ್ ರೈ,,ಸುಕೇಶ್ ಚೌಟ,ವಾಮನ ಆಚಾರ್ಯ ಉಪಸ್ಥಿತರಿದ್ದರು.

IMG-20200805-WA0041ಹಾಗೆಯೇ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿದೇವಸ್ಥಾನದಲ್ಲಿ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು       ಅವರ ನೇತೃತ್ವದಲ್ಲಿ ವಿಶೇಷಪೂಜೆ,ಪ್ರಾರ್ಥನೆ ನಡೆಯಿತು.ಭೂಮಿಪೂಜೆ ಪ್ರಯುಕ್ತ ಶ್ರೀಕ್ಷೇತ್ರದ ಅವರಣದಲ್ಲಿ ಅಶ್ವಥ ಸಸಿಯನ್ನು ನೆಡಲಾಯಿತು.    ಶಾಸಕ ರಾಜೇಶ್ ನಾಯ್ಕ್ ,ಜಿಲ್ಲಾ ಪ್ರ.ಕಾರ್ಯದರ್ಶಿರಾಮದಾಸ್ ಬಂಟ್ವಾಳ,ಪುರಸಭಾ ಸದಸ್ಯರಾದ ವಿದ್ಯಾವತಿ,ಹರಿಪ್ರಸಾದ್,ಜಯಂತಿ,ಸತೀಶ್ ಪಲ್ಲಮಜಲು,ಲಕ್ಷಣ್ ರಾಜ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಮಾನಾಥ ರಾಯಿ,ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ಸಹಿತ ಪಕ್ಷದ ಪ್ರಮುಖರು ಹಾಜರಿದ್ದರು.  ಕಣ್ತುಂಬಿಕೊಂಡ ಶಾಸಕರು:  ಬಳಿಕ ಶಾಸಕರು ಮನೆಗೆ ತೆರಳಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪ್ರದಾನಿ ಮೋದಿಯವರು ನೆರವೇರಿಸಿದ ಶಿಲಾನ್ಯಾಸ ಕಾರ್ಯಕ್ರಮದ ನೇರಪ್ರಸಾರವನ್ನು ಕಣ್ತುಂಬಿಕೊಂಡರು.    ಹಿ.ಜಾ.ವೇ.ಯಿಂದ ಪ್ರಾರ್ಥನೆ :   ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು:ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ  ವತಿಯಿಂದಲೂ  ಬಿ.ಸಿ.ರೊಡ್ ನ  ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಭು ಶ್ರೀರಾಮಚಂದ್ರನ ಭೂಮಿ ಪೂಜೆ  ಹಾಗೂ ಮುಂದಿನ ಎಲ್ಲಾ ಕೆಲಸಗಳು  ಮುಕ್ತಾಯಗೊಂಡು ಆದಷ್ಟು ಶೀಘ್ರ ಮಂದಿರ ನಿರ್ಮಾಣಗೊಳ್ಳಲಿ ಎಂದು ವಿಶೇಷ ಪೂಜೆ  ನಡೆಯಿತು.

By suddi9

Leave a Reply

Your email address will not be published. Required fields are marked *