ಬಂಟ್ವಾಳ: ಬಿಜೆಪಿ ಯುವಮೋರ್ಚಾ ಬಂಟ್ಟಾಳ ಇದರ ವತಿಯಿಂದ, ಸಂಗಬೆಟ್ಟು ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರೆವೇರಿಸಲಿದ್ದು ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲಿ ಮತ್ತು ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಪಾಂಗಲ್ಪಾಡಿ ವಿಷ್ಣುಮೂರ್ತಿ ದೇವಸ್ಥಾನದ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ,ರಾಮಮಂದಿರ ಭೂಮಿಪೂಜೆಯ ಸಾಂಕೇತಿಕವಾಗಿ ಗಿಡ ನೇಡುವ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಗಬೆಟ್ಟು ಜಿಪಂ ಸದಸ್ಯ ತುಂಗಪ್ಪ ಬಂಗೇರ,ತಾಪಂ ಸದಸ್ಯ ರಮೇಶ್ ಕುಡುಮೇರ್, ದ.ಕ ಜಿಲ್ಲಾ ಹಾಪ್ ಕಾಮ್ಸ್ ನ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ದ.ಕ ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಅಣ್ಣಳಿಕೆ,ಬಂಟ್ಟಾಳ ಬಿಜೆಪಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿಗಳಾದ ಪುರೊಷೊತ್ತಮ ಶೆಟ್ಟಿ ವಾಮದಪದವು,ಮತ್ತು ಹರ್ಷಿಣಿ ಪುಷ್ಪಾನಂದ, ಪಿಲತ್ತಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಕುಮಂಗಿಲ,ಇರ್ವತ್ತೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರ್, ಪುಂಜಾಲಕಟ್ಟೆ ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ಕುಮಾರ್ ಕುಂಟಾಜಾಲು,
ದಿನೇಶ್ ಮೂಲ್ಯ ಬಂಗೇರೆಕೆರೆ, ಬಿಜೆಪಿ ಪ್ರಮುಖರಾದ ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು ಚಂದ್ರಶೇಖರ ಶೆಟ್ಟಿ ವಾಮದಪದವು, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಕಿರಣ್ ಶೆಟ್ಟಿ ಮೂರ್ಜೆ,ರಂಜಿತ್ ಶೆಟ್ಟಿ ಬಂಗೇರೆಕೆರೆ, ಮೂಡುಪಡುಕೋಡಿ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಸತೀಶ್ ಸಪಲ್ಯ ಮುಂಡಬೈಲು,ಕಾರ್ಯದರ್ಶಿ ಹರಿಪ್ರಸಾದ್ ಅರ್ಕೆದೊಟ್ಟು, ಇರ್ವತ್ತೂರು ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ರವಿಶಂಕರ್ ಹೊಳ್ಳ ಮಣ್ಣೂರು,ಹಾಗೂ ಈ ಕಾರ್ಯಕ್ರಮದ ನೇತೃತ್ವವಹಿಸಿಕೊಂಡ ಬಂಟ್ಟಾಳ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರ್, ಯುವಮೋರ್ಚಾದ ಕಾರ್ಯದರ್ಶಿ ದಯಾನಂದ್ ಎಸ್ ಎರ್ಮೆನಾಡು,ಮತ್ತು ರಾಜೇಂದ್ರ ಪೂಜಾರಿ ಕರ್ಪೆ, ಉಪಸ್ಥಿತರಿದ್ದರು