ಬಂಟ್ವಾಳ: ಸಜೀಪಮುನ್ನೂರು ಶಾರದಾನಗರದ ಶಾರದಾಂಬ ಭಜನಾ ಮಂದಿರದಲ್ಲಿ ರಕ್ಷಾ ಬಂಧನ ಹಾಗೂ ಭಾರತ ಮಾತಾ ಪೂಜಾನ ಕಾರ್ಯಕ್ರಮ ಸೋಮವಾರ ಸಂಜೆ ಹಿಂದುಜಾಗರಣ ವೇದಿಕೆ ಶಾರದಾ ನಗರ ಶಾಖೆಯ ಆಶ್ರಯದಲ್ಲಿ ಜರಗಿತು.

ಮಾಗಣೆಯ ತಂತ್ರಿ, ಧಾರ್ಮಿಕ ಮುಂದಾಳು ಎo ಸುಬ್ರಹ್ಮಣ್ಯ ಭಟ್ ಅವರು ದಿಕ್ಸೂಚಿ ಭಾಷಣಗೈದು ಪುರಾಣಕಾಲದಲ್ಲಿ ಹಾಗೂ ಇತಿಹಾಸದಲ್ಲೂ ರಕ್ಷಾ ಬಂಧನ ಆಚರಿಸಿ ಜೀವ ರಕ್ಷಣೆಯನ್ನು ಮಾಡುತ್ತಿದ್ದ ಪ್ರಸಂಗವನ್ನು ಉದಾಹರಿಸಿದರು ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು .ಸುರೇಂದ್ರ ನಿರೂಪಿಸಿದರು ಇದೇ ಸಂದರ್ಭದಲ್ಲಿ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಭವ್ಯ ದೇಗುಲ ನಿರ್ಮಾಣಕ್ಕೆ ನಡೆಯವ ಭೂಮಿ ಪೂಜೆಯ ವೇಳೆ ಪ್ರತಿ ಮನೆಯಲ್ಲಿ ದೇವರ ಭಜನೆ ,ಧ್ಯಾನ ಮಾಡುವಂತೆ ಕೋರಲಾಯಿತು.
