ಬಂಟ್ವಾಳ:ಇಲ್ಲಿನ ಕರಿಯಂಗಳ ಹಿಂದೂ ಜಾಗರಣ ವೇದಿಕೆ ಘಟಕವನ್ನು ಪೊಳಲಿ ಶ್ರೀ ಅಖೀಲ್ವೇರ ದೇವಸ್ಥಾನದಲ್ಲಿ ಜಾಗರಣ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ್ ನೆತ್ರಕೆರೆ ಇವರ ಮಾರ್ಗದರ್ಶನದಲ್ಲಿ ಭಾನುವಾರ ಪುನರ್ ರಚಿಸಲಾಯಿತು. ಬಂಟ್ವಾಳ ತಾಲ್ಲೂಕು ಘಟಕ ಅಧ್ಯಕ್ಷ ತಿರುಲೇಶ್ ಬೆಳ್ಳೊರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.3btl-Kariyangala

ನೂತನ ಅಧ್ಯಕ್ಷರಾಗಿ ಯಶವಂತ ಕಲ್ಕುಡ ಪೊಳಲಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ದೇವಾಡಿಗ ಆಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ವಸಂತ ಪೂಜಾರಿ ಕಲ್ಕುಡ ಮತ್ತು ಜನರ್ಧನ ಸಪಲಿಗ, ಗೌರವ ಸಲಹೆಗಾರರಾಗಿ ಸದಾಶಿವ ದೇವಾಡಿಗ, ಕಾರ್ಯದರ್ಶಿಯಾಗಿ ಚಂದ್ರಹಾಸ ಕಲ್ಕುಡ ಪೊಳಲಿ, ಶೇಖರ ಪೂಜಾರಿ ಪೊಳಲಿ, ಚಂದ್ರಹಾಸ ದೇವಾಡಿಗ ಕಲ್ಕುಡ, ವಸಂತ ಅಖಿಲೇಶ್ವರ ಪೊಳಲಿ, ಸಂಪರ್ಕ ಪ್ರಮುಕ್ ಪ್ರವೀಣ್ ಸಪಲಿಗ ಇವರು ಆಯ್ಕೆಗೊಂಡರು.

ತಾಲ್ಲೂಕಿನ ಮಾತೃ ಸುರಕ್ಷಾ ಪ್ರಮುಖ್ ಶಿವಪ್ರಸಾದ್ ಧನುಪೂಜೆ, ವಲಯಾಧ್ಯಕ್ಷ ಮುರಳಿ ಪೊಳಲಿ, ವಲಯ ಪ್ರಧಾನ ಕಾರ್ಯದರ್ಶಿ  ಪುಷ್ಪರಾಜ್ ಕಮ್ಮಾಜೆ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *