ಬಂಟ್ವಾಳ : ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸೆಲ್ಕೋ ಫೌಂಡೇಶನ್ ಮತ್ತು ಕೆದ್ದಲಿಕೆ ಶಾಲೆಯ ಮಾದರಿ ಗ್ರಾಮ ಯೋಜನೆಯಡಿಯಲ್ಲಿ ಶಾಲೆಯಲ್ಲಿ ಸ್ಯಾನಿಟರಿ ಪ್ಯಾಡ್, ಬಳಸಿದ ಮಾಸ್ಕ್ ದಹನ ಘಟಕದ ಉದ್ಘಾಟನೆ ನೆರವೇರಿಸಲಾಯಿತು.ಜಿಲ್ಲಾ ಪಂಚಾಯತ್ ಸದಸ್ಯ ಪದ್ಮ ಶೇಖರ್ ಜೈನ್ ಘಟಕದ ಉದ್ಘಾಟನೆಗೈದು ಮಾತನಾಡಿ ಈ ಘಟಕದಿಂದ ಸ್ಯಾನಿಟರಿ ಪ್ಯಾಡ್, ಮೆಡಿಕಲ್ ತ್ಯಾಜ್ಯವನ್ನು , ಬಳಸಿದ ಮಾಸ್ಕ್ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ.
ಈ ತ್ಯಾಜ್ಯ ರಸ್ತೆಯಲ್ಲೆಡೆ ಬಿಸಾಡಿದರೆ ರೋಗ ರುಜಿನ ಬರುವ ಸಾಧ್ಯತೆ ಇದ್ದು, ಬಿವಿಟಿ ಸಂಸ್ಥೆಯ ಈ ತ್ಯಾಜ ದಹನ ಘಟಕದಲ್ಲಿ ಅಪಾಯಕಾರಿ ತ್ಯಾಜ್ಯವನ್ನು ಸುಲಭವಾಗಿ ವಿಲೇವಾರಿ ಮಾಡಲು ಸಾಧ್ಯ. ಇಂಥ ಘಟಕಗಳು ಪ್ರತಿ ಪಂಚಾಯತ್ ನಲ್ಲಿ ಅನುಷ್ಠಾನಕ್ಕೆ ತಂದರೆ ಈ ತ್ಯಾಜದ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆದ್ದಲಿಕೆ ಶಾಲಾ ನಿವೃತ್ತ ಮುಖ್ಯೋಪಾಧ್ಯಯರಾದ ರಮೇಶ್ ನಾಯಕ್ ರಾಯಿ, ಶಾಲಾ ಮುಖ್ಯೋಪಾಧ್ಯಾರಾದ ಕುಮಾರ್ ಎಚ್., ಎಸ್ ಡಿ ಎಂಸಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಲ್ ಕಟ್ಟೆ, ಪಂಚಾಯತ್ ಸದಸ್ಯರಾದ ಮೋಹನ್ ಆಚಾರ್ಯ, ಸತೀಶ್ ಪದಂತರಬೆಟ್ಟು, ಬಂದ ಬಿವಿಟಿ ಯೋಜನಾಧಿಕಾರಿಯಾದ ಜೀವನ್, ಶಾಲಾ ಶಿಕ್ಷಕರು, ರೈತರು, ಆಶಾ ಕಾರ್ಯಕರ್ತರು ಭಾಗವಹಿಸಿದರು.
