ಬಂಟ್ವಾಳ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸೆಲ್ಕೋ ಫೌಂಡೇಶನ್ ಮತ್ತು ಕೆದ್ದಲಿಕೆ ಶಾಲೆಯ ಮಾದರಿ ಗ್ರಾಮ ಯೋಜನೆಯಡಿ ಶಾಲೆಯಲ್ಲಿ ಎರೆ ಗೊಬ್ಬರ ಘಟಕದ ಉದ್ಘಾಟನೆ ನೆರವೇರಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್ ಘಟಕವನ್ನು ಉದ್ಘಾಟಿಸಿ ಈ ಘಟಕವು ಎರೆ ಗೊಬ್ಬರ ತಯಾರಿಸಿ ರೈತರಿಗೆ ಸಾವಯವ ಕೃಷಿ ಬಗ್ಗೆ ಹೆಚ್ಚಿನ ಜ್ಞಾನ ದೊರೆಯಲಿ ಎಂದು ಹಾರೈಸಿದರು.
ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಎರೆಗೊಬ್ಬರ ತೊಟ್ಟಿ ಮಾಡಿ ಕೆದ್ದಲಿಕೆ ಗ್ರಾಮವನ್ನು ಸಾವಯವ ಕೃಷಿಯಲ್ಲಿ ಮಾದರಿ ಗ್ರಾಮವಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ, ಕೆದ್ದಲಿಕೆ ಶಾಲಾ ನಿವೃತ್ತ ಮುಖ್ಯೋಪಾಧ್ಯಯರಾದ ರಮೇಶ್ ನಾಯಕ್ ರಾಯಿ, ಶಾಲಾ ಮುಖ್ಯೋಪಾಧ್ಯಾರಾದ ಕುಮಾರ್. ಎಚ್, ಎಸ್ ಡಿ ಎಂಸಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಲ್ ಕಟ್ಟೆ, ಪಂಚಾಯತ್ ಸದಸ್ಯರಾದ ಮೋಹನ್ ಆಚಾರ್ಯ, ಸತೀಶ್ ಪದಂತರಬೆಟ್ಟು,ಬಿವಿಟಿ ಯೋಜನಾಧಿಕಾರಿಯಾದ ಜೀವನ್, ಶಾಲಾ ಶಿಕ್ಷಕರು, ರೈತರು, ಆಶಾ ಕಾರ್ಯಕರ್ತರು ಭಾಗವಹಿಸಿದರು.