ಬಂಟ್ವಾಳ: ಅಕ್ರಮವಾಗಿ ಟೆಂಪೋವೊಂದರಲ್ಲಿ ಕೋಣ ಸಾಗಾಟಮಾಡುತ್ತಿರುವುದನ್ನು ಬಂಟ್ವಾಳನಗರ ಪೊಲೀಸರು ಸೋಮವಾರ ಮುಂಜಾನೆ ಬಿ.ಸಿ.ರೋಡ್ ನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಳಿ ಪತ್ತೆ ಹಚ್ಚಿದ್ದಾರೆ. ಈ ಸಂದರ್ಭ ಟೆಂಪೋ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ರಾತ್ರಿಗಸ್ತಿನಲ್ಲಿದ್ದ ಬಂಟ್ವಾಳ ನಗರ ಪೊಲೀಸರು ಕೆಎಸ್ ಆರ್ ಟಿಸಿ ಬಸ್ ತಂಗುದಾಣದ ಬಳಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ  ಬೆಂಗಳೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಟೆಂಪೊವನ್ನು ಅನುಮಾನದಿಂದ ತಡೆದು ನಿಲ್ಲಿಸಿದಾಗ ಅದರ ಚಾಲಕ ಟೆಂಪೋವನ್ನು ಮುಂದಕ್ಕೆ ಚಲಾಯಿಸಿ ಅಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆನ್ನಲಾಗಿದೆ.  ತಕ್ಷಣ  ಸ್ಥಳಕ್ಕೆ ತೆರಳಿದ ಪೊಲೀಸರು ಟೆಂಪೋದ ಹಿಂಬದಿ ತಪಾಸಣೆಗೈದಾಗ ಒಂದು ಕೋಣವನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಿರುವುದು ಪತ್ತೆಯಾಗಿದೆ.ಇದನ್ನು ಎಲ್ಲಿಂದಲೋ ಕಳವುಗೈದು ಗೋವಧಾಕೇಂದ್ರಕ್ಕೆ ಅಕ್ರಮವಾಗಿ ಸಾಗಿಸಲಾಗಿರಬೇಕೆಂದು ಶಂಕಿಸಲಾಗಿದೆ.ಬಂಟ್ವಾಳ ನಗರ ಪೊಲೀಸರು ಟೆಂಪೋಹಾಗೂ ಕೋಣವನ್ನು ಪೊಲೀಸರು ವಶಪಡಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ. ವಶಪಡಿಸಲಾದ ಸೊತ್ರುಗಳ ಮೌಲ್ಯ 4.05 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.

By suddi9

Leave a Reply

Your email address will not be published. Required fields are marked *