ಬಂಟ್ವಾಳ: “ಕಾರ್ಗಿಲ್ ವಿಜಯ್ ದಿವಸ್ ” ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಬಂಟ್ವಾಳ ಮತ್ತು ಸಿದ್ದಕಟ್ಟೆ ಘಟಕದಿಂದ ನಿವೃತ್ತ ಯೋಧರೋರ್ವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ, ಉರುಡಂಗೆ ನಿವಾಸಿಯಾಗಿರುವ ಸಿ ಆರ್ ಪಿ ಎಫ್ ನ ನಿವೃತ್ತ ಸೈನಿಕರಾದ ರಾಜೇಶ್ ಶೆಟ್ಟಿಗಾರ್ ಅವರನ್ನು ಅಭಾವಿಪ ಪದಾಧಿಕಾರಿಗಳು ಅವರ ನಿವಾಸದಲ್ಲಿ ಭೇಟಿಯಾಗಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿ ಪರಿಷತ್ ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಜನರು ಹೆಚ್ಚು,ಹೆಚ್ಚು ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ಭಾರತ ಮಾತೆಯ ಸೇವೆಗೆ ಮುಂದಾಗಬೇಕು ಎಂದರು. ರಾಜೇಶ್ ಶೆಟ್ಟಿಗಾರ್ ಅವರು 1994 ರ ಜೂ.27 ರಂದು ದೇಶದ ಅರೆ ಸೇನಾಪಡೆಯಾದ ‘ಸಿಆರ್ ಪಿಎಫ್’ ಗೆ ಸೇರ್ಪಡೆಗೊಂಡಿದ್ದರು . ಬೆಂಗಳೂರಿನ ಯಲಹಂಕದಲ್ಲಿ ತರಬೇತಿ ಪಡೆದು, 1995 ಜೂನ್ ನಿಂದ 1997ರ ಏಪ್ರಿಲ್ ವರೆಗೆ ಚೆನ್ನೈಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಪ್ರಧಾನಮಂತ್ರಿ ರಕ್ಷಣಾ ಏಜೆನ್ಸಿಯಾದ ವಿಶೇಷ ಕಾರ್ಯ ಸಮೂಹದಲ್ಲಿ 1997ರಿಂದ 2003ವರೆಗೆ ಸೇವೆ ಸಲ್ಲಿಸಿ, 2003ರಿಂದ 2007ರವರೆಗೆ ಬೆಂಗಳೂರಿನಲ್ಲಿ.2007ರಿಂದ 2014ರವರೆಗೆ ಜಮ್ಮು ಕಾಶ್ಮೀರದ ಫುಲುವಾಮ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು,2014ರಲ್ಲಿ ಪದೇೂನ್ನತಿ ಹೊಂದಿ ಬಿಹಾರ ರಾಜ್ಯದ ಗಯಾದಲ್ಲಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿ.2017ರ ಅಗಸ್ಟ್ 30ರಂದು ನಿವೃತಿ ಹೊಂದಿದ್ದರು.ಇವರು ಸುದೀರ್ಘ 23 ವರ್ಷಗಳ ಕಾಲ ನಮ್ಮ ದೇಶದ ಅರೆಸೇನಾಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಈ ಸಂದರ್ಭ ದಲ್ಲಿ ಎಬಿವಿಪಿ ತಾಲೂಕು ಸಂಚಾಲಕರಾದ ಹರ್ಷಿತ್ ಕೈೂಲ, ತಾಲೂಕು ಸಹ ಸಂಚಾಲಕರಾದ ದಿನೇಶ್ ಕೈೂಲ, ನಗರ ಸಹಕಾರ್ಯದರ್ಶಿ ನಾಗರಾಜ್ ,ಘಟಕದ ಅಧ್ಯಕ್ಷ ಗುರುಪ್ರಸಾದ್,ಹಾಗೂ ಕಾರ್ಯಕರ್ತರಾದ ರಾಜೇಶ್, ದೀಪಕ್, ಪ್ರಜ್ವಲ್, ಕಿರಣ್,ಪ್ರದೀಪ್,ಶಿವುಕುಮಾರ್ ಉಪಸ್ಥಿತರಿದ್ದರು._
