ಬಂಟ್ವಾಳ: ಮಾರುತಿ ಒಮ್ನಿ ಕಾರೊಂದರಲ್ಲಿ ಗೋವೊಂದನ್ನು ಅಕ್ರಮವಾಗಿ ಸಾಗಾಟಮಾಡುತ್ತಿರುವುದನ್ನು ಬಂಟ್ವಾಳ ನಗರ ಪೊಲೀಸರು ಮಂಗಳವಾರ ಪತ್ತೆ ಹಚ್ಚಿ ಗೋವುವನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.17-18-43-IMG-20200728-WA00092

ಸೋಮವಾರ ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ನಗರ ಪೊಲೀಸ್ ಸಿಬ್ಬಂದಿಗಳು ಮಾರ್ನಬೈಲ್ ನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮಾಹಿತಿಯೊಂದನ್ನು ಆಧರಿಸಿ ಅತೀವೇಗವಾಗಿ ಬರುತ್ತಿದ್ದ ಮಾರುತಿಕಾರನ್ನು ತಡೆಯಲು ಸೂಚಿಸಿದಾಗ ಅದರ ಚಾಲಕ ಪೊಲೀಸರ ಸೂಚನೆಯನ್ನು ದಿಕ್ಕರಿಸಿ ಮುಂದಕ್ಕೆ ಚಲಾಯಿಸಿ ನಂದಾವರ ರಸ್ತೆಯ ಮೂಲಕ ಪರಾರಿಗೆ ಯತ್ನಿಸಿದ್ದನೆನ್ನಲಾಗಿದೆ.

ಅನುಮಾನಗೊಂಡ ಪೊಲೀಸರು ಕಾರನ್ನು ಬೆನ್ನತ್ತಿಕೊಂಡು ಬರುತ್ತಿದ್ದಂತೆ ಪರಾರಿಯಾಗುವ ಭರದಲ್ಲಿ ಕಾರು ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದೆಯೆನ್ನಲಾಗಿದೆ.ತಕ್ಷಣ  ಆರೋಪಿಗಳು ಕಾರನ್ನು ಅಲ್ಲಿಯೇ ತೊರೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.ಪೊಲೀಸರು  ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಗೋವೊಂದ ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ತುಂಬಿಸಿರುವುದು ಕಂಡುಬಂದಿದೆ.ಕೂಡಲೇ ಕಾರು ಹಾಗೂ ಜಾನುವಾರನ್ನು ಪೊಲೀಸರು ವಶಪಡಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಈ ಗೋವನ್ನು ಎಲ್ಲಿಂದಲೋ ಕಳವುಗೈದು ತಂದು ವಧಾಕೇಂದ್ರಕ್ಕೆ ಸಾಗಾಟಮಾಡಲಾಗುತ್ತಿರಬೇಕೆಂದು ಶಂಕಿಸಲಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ. ಸೋಮವಾರ ಬಿ.ಸಿ.ರೋಡಿನಲ್ಲಿ ಅಕ್ರಮವಾಗಿ  ಕೋಣವನ್ನು ಸಾಗಾಟಮಾಡುತ್ತಿರುವುದನ್ನು ನಗರ ಠಾಣಾ ಪೊಲೀಸರು ಪತ್ತೆಹಚ್ಚಿದ್ದರು.ಆದರೆ ಈ ಎರಡು ಪ್ರಕರಣದಲ್ಲಿ ಆರೋಪಿಗಳು ಪರಾರಿಯಾಗಿರುವ ಬಗ್ಗೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಮಾತ್ರ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *