ಬಂಟ್ವಾಳ: ತಾಲೂಕಿನ ರಾಯಿ-ಕೈತ್ರೋಡಿ ರಸ್ತೆ ನಡುವಿನ ಮಾಬೆಟ್ಟು ಎಂಬಲ್ಲಿ ಚುಚ್ಚುಮದ್ದು ನೀಡುವ ರಾಶಿ ರಾಶಿ ಸಿರಿಂಜ್ ರವಿವಾರ ಪತ್ತೆ ಯಾಗಿದೆ .ಖಾಸಗಿ ಆಸ್ಪತ್ತೆಗೆ ಸೇರಿದೆಯೆನ್ನಲಾದ ಚುಚ್ಚುಮದ್ದು ನೀಡುವ ರಾಶಿ ರಾಶಿ ಸಿರಿಂಜ್ ಗಳನ್ನು ಕಿಡಿಗೇಡಿಗಳು ರಸ್ತೆ ಬದಿ ಎಸೆದಿರ ಬೇಕೆಂದು ಶಂಕಿಸಲಾಗಿದೆ.
ಸ್ಥಳೀಯ ನಿವಾಸಿಗಳಾದ ಬಸವರಾಜ್, ಕಾಂತಪ್ಪ, ಮೋಹನ ಪೂಜಾರಿ, ಸುನಿತಾ ಮತ್ತಿತರರು ಇದನ್ನು ತೆರವುಗೊಳಿಸಿದರು.
