ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ದರ್ಖಾಸ್ತು  ನಿವಾಸಿ ಹಿರಿಯ ದೈವ ನರ್ತಕ, ಜಾನಪದ ಕಲಾವಿದ ನಾಟಿವೈದ್ಯರಾದ ಬಟ್ಯ ನಲಿಕೆಯವರು (70) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಪಂಜುರ್ಲಿ, ಕಲ್ಲುರ್ಟಿ, ಕೊರಗಜ್ಜ, ಕೊರತಿ, ಕುಪ್ಪೆ ಪಂಜುರ್ಲಿ ಮುಂತಾದ ದೈವಗಳನ್ನು ಕಟ್ಟುವುದರಲ್ಲಿ ಪ್ರಸಿದ್ಧರಾಗಿದ್ದರು.23bhbatyanalikeyavaru

ತುಳು ಜನಪದ ಕಲಾವಿದರಾದ  ಇವರು ಅನೇಕ ಕಲಾ ಮೇಳ, ಕಾರ್ಯಕ್ರಮ,ಸಭೆ, ಸಮಾರಂಭ, ಮೆರವಣಿಗೆ, ಉತ್ಸವಗಳಲ್ಲಿ   ಕಾರ್ಯಕ್ರಮ ನೀಡಿದ್ದರು, ನಾಟಿ ಪದ, ಓಬೆಲೆ, ಆಟಿ ಕಳಂಜ, ಮಾದಿರ ಪದ ಬಲ್ಲವರಾಗಿದ್ದರು, ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಾಪದ ಪಿರವು ತುಳು ಧಾರಾವಾಹಿಯಲ್ಲಿ  ಜಾನಪದ ಕಲಾವಿದರಾಗಿ  ನಟಿಸಿದ್ದಾರೆ, ಇವರನ್ನು ಅನೇಕಸಂಘ, ಸಂಸ್ಥೆ, ಸಂಘಟನೆ, ಸಮ್ಮೇಳನಗಳು ಸನ್ಮಾನಿಸಿ ಗೌರವಿಸಿವೆ,ಪತ್ನಿ, ಇಬ್ಬರು ಪುತ್ರರು, ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಇವರು ಅಗಲಿದ್ದಾರೆ

By suddi9

Leave a Reply

Your email address will not be published. Required fields are marked *