ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಒಟ್ಟು14 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು,ಪುರಸಭಾ ವ್ಯಾಪ್ತಿಯಲ್ಲಿ ಕೇವಲ ಒಂದು ಪಾಸಿಟಿವ್ ಪತ್ತೆಯಾಗಿದೆ. ಇವರಲ್ಲಿ 2 ವರ್ಷದ ಹೆಣ್ಣುಮಗು ಹಾಗೂ 83 ವರ್ಷದ ವೃದ್ಧ ಸೇರಿದ್ದಾರೆ.
ವಿವರ ಹೀಗಿದೆ. ಸರಪಾಡಿಯ 83 ವರ್ಷದ ವೃದ್ಧ, ಕಾವಳಮುಡೂರಿನ 25 ವರ್ಷದ ಮಹಿಳೆ, ಸಜೀಪಮುನ್ನೂರಿನ 44 ವರ್ಷದ ಪುರುಷ, ವಿಟ್ಲದ 32 ವರ್ಷದ ಪುರುಷ, ಫರಂಗಿಪೇಟೆ 47 ವರ್ಷದ ಮಹಿಳೆ, ತುಂಬೆಯ 35 ವರ್ಷದ ಪುರುಷ, ತಲಪಾಡಿಯ 54 ವರ್ಷದ ಮಹಿಳೆ, ಪುದುವಿನ 36 ವರ್ಷದ ಪುರುಷ, ನಾವುರದ 40 ವರ್ಷದ ಮಹಿಳೆ, ಫಜೀರುವಿನ 36 ವರ್ಷದ ಮಹಿಳೆ, ಫಜೀರುವಿನ 13 ವರ್ಷದ ಬಾಲಕ, ಕುಡ್ತಮುಗೇರಿನ 27 ವರ್ಷದ ಮಹಿಳೆ, ಗೋಳ್ತಮಜಲಿನ 2 ವರ್ಷದ ಮಗು.ಇದರೊಂದಿಗೆ ಎರಡು ದಿನದ ಬಳಿಕ ಮತ್ತೆ ತಾಲೂಕಿನಲ್ಲಿ ಕೊರೋನ ಪಾಸಿಟಿವ್ ಎರಡಂಕೆ ದಾಟಿದೆ.
