ಕೈಕಂಬ : ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು, ನಿವೃತ್ತರಾಗಿರುವ ಜಿ ಟಿ ಅಣ್ಣು ಭಟ್ ಯಾನೆ ಅಪ್ಪಯ್ಯ ಮಾಸ್ತರ್(94) ನೂಯಿ ಇಟ್ಟಬಾಗಲಿನ ಸ್ವಗೃಹದಲ್ಲಿ ಭಾನುವಾರ ರಾತ್ರಿ ವಯೋಸಹಜ ಅನರೋಗ್ಯದಿಂದ ನಿಧನರಾದರು.gur-july-20-annu bhat

ಚೆಂಡೆ ವಾದಕರಾಗಿದ್ದ ಇವರು, ಹಲವು ಹವ್ಯಾಸಿ ಯಕ್ಷಗಾನ ಸಂಘಗಳ ಯಕ್ಷಪ್ರಿಯರಿಗೆ ಹಿಮ್ಮೇಳ ತರಬೇತಿ ನೀಡಿದ್ದರು. ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಆನುವಂಶಿಕ ತಂತ್ರಿಯಾಗಿದ್ದ ಇವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ. ಸೋಮವಾರ ಅಂತ್ಯಕ್ರಿಯೆ ನಡೆಯಿತು

By suddi9

Leave a Reply

Your email address will not be published. Required fields are marked *