ಮಾಣಿ: ಮೈಸೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ, ಉದ್ಯಮಿ ಎನ್. ಮೊಹಮ್ಮದ್(56) ಹಾಜಿ ಅವರು ಹೃದಯಾಘಾತದಿಂದ ಶನಿವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.ಉಸಿರಾಟದ ತೊಂದರೆಯಿಂದಾಗಿ ಮೊಹಮ್ಮದ್ ಅವರನ್ನು ನಿನ್ನೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ನಿಧನರಾಗಿದ್ದಾರೆ.a4efcb7f-cc60-4457-8cf9-4d092d5d4c1f

ಎನ್. ಮೊಹಮ್ಮದ್ ಹಾಜಿ ಮೂಲತಃ ಕೋಡಾಜೆ ಸಮೀಪದ ನೇರಳಕಟ್ಟೆ ನಿವಾಸಿಯಾಗಿದ್ದು, ಮೈಸೂರಿನ ತಿಲಕ್ ನಗರದಲ್ಲಿ ವಾಸವಾಗಿದ್ದರು.ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಅವರು ಮೈಸೂರು ಜಿಲ್ಲೆಯಲ್ಲಿ ಅರಸನ್ ಸೋಪ್ ವಿತರಕ ಹಾಗೂ ಸುಲ್ತಾನ್ ಬೀಡಿ ಏಜೆಂಟರಾಗಿದ್ದರು. ಮೈಸೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದು, ಇವರ ಅಗಲಿಕೆಗೆ ಕೋಡಾಜೆ ಜಮಾಅತ್ ಆಡಳಿತ ಕಮಿಟಿ ತೀವ್ರ ಸಂಪಾತ ಸೂಚಿಸಿದೆ.

By suddi9

Leave a Reply

Your email address will not be published. Required fields are marked *