ಬಂಟ್ವಾಳ: ತಾಲೂಕಿನ ನಡುಮೊಗರು ಸರಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಕಟ್ಟಡ ಸಂಪೂರ್ಣ ಹಾನಿಗೊಂಡಿರುವ ಘಟನೆ ರವಿವಾರ ಸಂಜೆ ನಡೆದಿದೆ. ಶಾಲೆಯ ಕುಸಿದ ಕಟ್ಟಡವು ಹಳೆಯದಾಗಿದ್ದು, ಕಳೆದ ಬಾರಿ ಅದರ ಮೇಲ್ಛಾವಣಿ ದುರಸ್ತಿ ಮಾಡಲಾಗಿತ್ತು.

ಪ್ರಸ್ತುತ ಕಟ್ಟಡಕ್ಕೆ ಪೂರ್ತಿ ಹಾನಿಯಾಗಿದ್ದು, ಘಟನೆಯ ಕುರಿತು ಸ್ಥಳೀಯರು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಶಾಲೆಗೆ ರಜಾ ದಿನವಾಗಿದ್ದರಿಂದ, ಯಾವುದೇ ಅನಾಹುತ ಸಂಭವಿಸಿಲ್ಲ.

